ಹೋಬರ್ಟ್: ಭಾರತದ ಆಟಗಾರ್ತಿಯರಾದ ಶೆಫಾಲಿ ವರ್ಮಾ (57,50 ಎಸೆತ, 6 ಬೌಂಡರಿ) ಅವರ ಸೊಗಸಾದ ಅರ್ಧಶತಕ ಹಾಗೂ ರಾಧಾ ಯಾದವ್ (31ಕ್ಕೆ2) ಗಳಿಸಿದ ಎರಡು ವಿಕೆಟ್ಗಳ ನೆರವಿನಿಂದ ಸಿಡ್ನಿ ಸಿಕ್ಸರ್ ತಂಡವು ಜಯ ಗಳಿಸಿತು. ಇಲ್ಲಿ ನಡೆಯುತ್ತಿರುವ ಮಹಿಳಾ ಬಿಗ್ಬ್ಯಾಷ್ ಟಿ20 ಲೀಗ್ನಲ್ಲಿ ಐದು ವಿಕೆಟ್ಗಳಿಂದ ಹೋಬರ್ಟ್ ಹರಿಕೇನ್ ತಂಡವನ್ನು ಮಣಿಸಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಹೋಬರ್ಟ್ ತಂಡವು ನಿಗದಿತ ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿತು. ಭಾರತದ ರಿಚಾ ಘೋಷ್ (46, 46ಎ, 1 ಬೌಂಡರಿ, 3 ಸಿಕ್ಸರ್) ತಂಡದ ಪರ ಗರಿಷ್ಠ ರನ್ ದಾಖಲಿಸಿದರು.

ರಾಧಾ ಯಾದವ್ ಅವರು ರಿಚಾ ಹಾಗೂ ಶಶಾ ಮೊಲೊನಿ (22) ಅವರ ವಿಕೆಟ್ಗಳನ್ನು ತಮ್ಮದಾಗಿಸಿಕೊಂಡರು.

ಸಾಧಾರಣ ಗುರಿ ಬೆನ್ನತ್ತಿದ ಸಿಡ್ನಿ ಸಿಕ್ಸರ್ಸ್, ಶೆಫಾಲಿ ಹಾಗೂ ನಾಯಕಿ ಎಲಿಸ್ ಪೆರಿ (27) ಅವರ ಉತ್ತಮ ಬ್ಯಾಟಿಂಗ್ ಬಲದಿಂದ ಮೂರು ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿತು. ಐದು ವಿಕೆಟ್ ಕಳೆದುಕೊಂಡು 129 ರನ್ ಗಳಿಸಿತು.

ಮತ್ತೊಂದು ಪಂದ್ಯದಲ್ಲಿ ಪರ್ತ್ ಸ್ಕಾಚರ್ಸ್ ತಂಡವು ಸೂಪರ್ ಓವರ್ನಲ್ಲಿ ಬ್ರಿಸ್ಬೇನ್ ಹೀಟ್ ತಂಡವನ್ನು ಸೋಲಿಸಿತು. ಬ್ರಿಸ್ಬೇನ್ ಪರ ಕಣಕ್ಕಿಳಿದಿದ್ದ ಪೂನಂ ಯಾದವ್ ಎರಡು ವಿಕೆಟ್ ಗಳಿಸಿ ಮಿಂಚಿದ್ದರು. ಆದರೆ ಅವರ ಆಟ ವ್ಯರ್ಥವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.