ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಢಾಕಾ ಪ್ರೀಮಿಯರ್ ಲೀಗ್‌: ದುರ್ವತನೆ ತೋರಿದ ಶಕೀಬ್ ಅಲ್ ಹಸನ್‌ಗೆ 4 ಪಂದ್ಯಗಳ ನಿಷೇಧ

Last Updated 12 ಜೂನ್ 2021, 13:30 IST
ಅಕ್ಷರ ಗಾತ್ರ

ಢಾಕಾ: ಅಸಭ್ಯ ವರ್ತನೆ ತೋರಿದ ಕಾರಣಕ್ಕೆ ಬಾಂಗ್ಲಾ ಕ್ರಿಕೆಟಿಗ ಶಕೀಬ್ ಅಲ್ ಹಸನ್‌ ಅವರಿಗೆ ಢಾಕಾ ಪ್ರೀಮಿಯರ್ ಲೀಗ್‌ನ ನಾಲ್ಕು ಪಂದ್ಯಗಳಿಗೆ ನಿಷೇಧ ಶಿಕ್ಷೆ ವಿಧಿಸಲಾಗಿದೆ.

ಮಹಮ್ಮಡನ್ ಸ್ಪೋರ್ಟಿಂಗ್‌ ತಂಡದ ಪರ ಆಡಿದ್ದ ಶಕೀಬ್, ಅಬಹಾನಿ ಲಿಮಿಟೆಡ್ ವಿರುದ್ಧದ ಪಂದ್ಯದಲ್ಲಿ ಅಂಪೈರ್‌ ತೀರ್ಪು ಪ್ರಶ್ನಿಸಿ ದುರ್ವತನೆ ತೋರಿದ್ದರು.

ಮೊದಲು ಕಾಲಿನಿಂದ ವಿಕೇಟ್‌ ಒದ್ದಿದ್ದ ಶಕೀಬ್, ನಂತರ ವಿಕೆಟ್‌ಗಳನ್ನು ಕಿತ್ತೆಸೆದಿದ್ದರು. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಕ್ರಿಕೆಟ್‌ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಈ ಹಿನ್ನೆಲೆಯಲ್ಲಿ ಟೂರ್ನಿಯ 8, 9, 10, 11ನೇ ಪಂದ್ಯಗಳಿಗೆ ನಿಷೇಧ ವಿಧಿಸಿ ಕಾಜಿ ಇಮಾಮ್ ಅಧ್ಯಕ್ಷತೆಯಲ್ಲಿ ಢಾಕಾ ಮಹಾನಗರದ ಕ್ರಿಕೆಟ್ ಸಮಿತಿ (ಸಿಸಿಡಿಎಂ) ನಿರ್ಧಾರ ತೆಗೆದುಕೊಂಡಿದೆ ಎಂದು ವರದಿಯಾಗಿದೆ.

ಬಾಂಗ್ಲಾದೇಶದ ಪರ ಶಕೀಬ್‌, 600 ವಿಕೆಟ್‌ ಕಬಳಿಸಿ, 10 ಸಾವಿರಕ್ಕೂ ಹೆಚ್ಚು ರನ್‌ ಗಳಿಸಿದ ಸಾಧನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT