ಭಾನುವಾರ, ನವೆಂಬರ್ 27, 2022
21 °C

ಭಾರತ ವಿರುದ್ಧದ ಸರಣಿ: ಬಾಂಗ್ಲಾ ಏಕದಿನ ತಂಡಕ್ಕೆ ಶಕೀಬ್‌ ವಾಪಸ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಢಾಕಾ: ಆಲ್‌ರೌಂಡರ್‌ ಶಕೀಬ್‌ ಅಲ್‌ ಹಸನ್‌ ಅವರು ಬಾಂಗ್ಲಾದೇಶ ಏಕದಿನ ಕ್ರಿಕೆಟ್‌ ತಂಡಕ್ಕೆ ಮರಳಿದ್ದು, ಭಾರತ ವಿರುದ್ಧದ ಸರಣಿಯಲ್ಲಿ ಆಡಲಿದ್ದಾರೆ.

ಶಕೀಬ್‌ ಅವರು ವೆಸ್ಟ್‌ ಇಂಡೀಸ್‌ ಮತ್ತು ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಆಡಿರಲಿಲ್ಲ. ಆದರೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಬಾಂಗ್ಲಾ ತಂಡವನ್ನು ಮುನ್ನಡೆಸಿದ್ದರು.

ಬ್ಯಾಟರ್‌ಗಳಾದ ನಜ್ಮುಲ್‌ ಹೊಸೇನ್‌ ಮತ್ತು ಯಾಸಿರ್‌ ಅಲಿ ಅವರು 16 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬ್ಯಾಟರ್‌ ಮೊಸದ್ದೆಕ್‌ ಹೊಸೇನ್, ಸ್ಪಿನ್ನರ್‌ ತೈಜುಲ್‌ ಇಸ್ಲಾಂ ಮತ್ತು ವೇಗಿ ಶರೀಫುಲ್‌ ಇಸ್ಲಾಂ ಅವರನ್ನು ಪರಿಗಣಿಸಿಲ್ಲ.

ಭಾರತ ವಿರುದ್ಧದ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳು ಡಿ.4 ಮತ್ತು 7 ರಂದು ಢಾಕಾದಲ್ಲಿ ನಡೆಯಲಿದ್ದು, ಕೊನೆಯ ಪಂದ್ಯ ಡಿ.10 ರಂದು ಚಿತ್ತಗಾಂಗ್‌ನಲ್ಲಿ ಆಯೋಜನೆಯಾಗಿದೆ.

ತಂಡ ಹೀಗಿದೆ: ತಮೀಮ್‌ ಇಕ್ಬಾಲ್‌ (ನಾಯಕ), ಲಿಟನ್‌ ದಾಸ್, ಅನಾಮುಲ್‌ ಹಕ್‌, ಶಕೀಬ್‌ ಅಲ್‌ ಹಸನ್, ಮುಷ್ಫಿಕುರ್‌ ರಹೀಂ, ಅಫೀಫ್‌ ಹೊಸೇನ್, ಯಾಸಿರ್‌ ಅಲಿ, ಮೆಹ್ದಿ ಹಸನ್‌ ಮಿರಾಜ್, ಮುಸ್ತಫಿಜುರ್‌ ರಹ್ಮಾನ್, ತಸ್ಕಿನ್‌ ಅಹಮದ್, ಹಸನ್‌ ಮಹಮೂದ್, ಎಬಾದತ್‌ ಹೊಸೇನ್, ನಸುಮ್‌ ಅಹಮದ್, ಮಹಮೂದುಲ್ಲಾ ರಿಯಾದ್, ನಜ್ಮುಲ್‌ ಹೊಸೇನ್ ಮತ್ತು ನೂರುಲ್‌ ಹಸನ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು