ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

AUS vs WI: ಪ್ಯಾಟ್, ಜೋಷ್ ದಾಳಿಗೆ ಕುಸಿದ ವಿಂಡೀಸ್

ಆಲ್‌ರೌಂಡ್ ಆಟವಾಡಿದ ವಿಂಡೀಸ್ ಆಟಗಾರ ಜೋಸೆಫ್
Published 17 ಜನವರಿ 2024, 12:53 IST
Last Updated 17 ಜನವರಿ 2024, 12:53 IST
ಅಕ್ಷರ ಗಾತ್ರ

ಅಡಿಲೇಡ್: ತಲಾ ನಾಲ್ಕು ವಿಕೆಟ್ ಗಳಿಸಿದ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಜೋಷ್ ಹ್ಯಾಜಲ್‌ವುಡ್ ದಾಳಿಯ ಮುಂದೆ ಬುಧವಾರ ಆರಂಭವಾದ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಸಾಧಾರಣ ಮೊತ್ತಕ್ಕೆ ಕುಸಿಯಿತು.

ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಮೊದಲ ದಿನದಾಟದಲ್ಲಿ ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಜೋಷ್ (44ಕ್ಕೆ4) ಮತ್ತು ಕಮಿನ್ಸ್ (41ಕ್ಕೆ4) ಅವರ ದಾಳಿಯ ಮುಂದೆ ವಿಂಡೀಸ್ 62.1 ಓವರ್‌ಗಳಲ್ಲಿ 188 ರನ್‌ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು.

ಆಸ್ಟ್ರೇಲಿಯಾದ ಬೌಲಿಂಗ್ ದಾಳಿಯ ನಡುವೆಯೂ  ಕಿರ್ಕ್ ಮೆಕೆಂಜಿ (50; 94ಎ, 4X7) ಮತ್ತು 11ನೇ ಕ್ರಮಾಂಕದ ಆಟಗಾರ ಶಾಮರ್ ಜೋಸೆಫ್ (36, 41ಎ, 4X3, 6X1) ವಿಂಡೀಸ್ ತಂಡವು ಅಲ್ಪಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು.

ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಜೋಸೆಫ್ (18ಕ್ಕೆ2) ಪೆಟ್ಟು ಕೊಟ್ಟರು. ಆರಂಭಿಕ ಬ್ಯಾಟರ್‌ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲಾಬುಷೇನ್ ಅವರ ವಿಕೆಟ್‌ಗಳನ್ನು ಕಬಳಿಸಿದರು. ಇದರಿಂದಾಗಿ ಆತಿಥೇಯ ಬಳಗವು ದಿನದಾಟದ ಕೊನೆಗೆ 21 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 59 ರನ್ ಗಳಿಸಿದೆ. ಉಸ್ಮಾನ್ ಖ್ವಾಜಾ (ಬ್ಯಾಟಿಂಗ್ 30) ಮತ್ತು ಕ್ಯಾಮರಾನ್ ಗ್ರೀನ್ (ಬ್ಯಾಟಿಂಗ್ 6) ಕ್ರೀಸ್‌ನಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್:

ವೆಸ್ಟ್ ಇಂಡೀಸ್:  62.1 ಓವರ್‌ಗಳಲ್ಲಿ 188 (ಕಿರ್ಕ್ ಮೆಕೆಂಜಿ 50, ಅಜಂ ಜೋಸೆಫ್ 14, ಶಾಮರ್ ಜೋಸೆಫ್ 36, ಜೋಷ್ ಹ್ಯಾಜಲ್‌ವುಡ್ 44ಕ್ಕೆ4, ಪ್ಯಾಟ್ ಕಮಿನ್ಸ್ 41ಕ್ಕೆ4)

ಆಸ್ಟ್ರೇಲಿಯಾ: 21 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 59 (ಉಸ್ಮಾನ್ ಖ್ವಾಜಾ ಬ್ಯಾಟಿಂಗ್ 30, ಸ್ಟೀವ್ ಸ್ಮಿತ್ 12, ಕ್ಯಾಮರಾನ್ ಗ್ರೀನ್ ಬ್ಯಾಟಿಂಗ್ 6, ಶಾಮರ್ ಜೋಸೆಫ್ 18ಕ್ಕೆ2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT