ಗುರುವಾರ , ಫೆಬ್ರವರಿ 25, 2021
28 °C
ಕೆಎಸ್‌ಸಿಎ ಎಸ್‌.ಎ.ಶ್ರೀನಿವಾಸನ್ ಸ್ಮಾರಕ 23 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿ

ಶಶಾಂಕ್‌ಗೆ ಆರು ವಿಕೆಟ್‌: ಸಂಯುಕ್ತ ಮೊಫುಶಿಲ್ ಇಲೆವನ್‌ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಶಶಾಂಕ್‌ ಕೆ. (34ಕ್ಕೆ 6) ಅವರ ಪ್ರಭಾವಿ ಬೌಲಿಂಗ್ ದಾಳಿಯ ನೆರವಿನಿಂದ ಸಂಯುಕ್ತ ಮೋಫುಶಿಲ್ ಇಲೆವನ್ ತಂಡವು ಕೆಎಸ್‌ಸಿಎ ಎಸ್‌.ಎ.ಶ್ರೀನಿವಾಸನ್ ಸ್ಮಾರಕ 23 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಶನಿವಾರ 10 ವಿಕೆಟ್‌ಗಳಿಂದ ಮೋಫುಶಿಲ್ ಇಲೆವನ್ ತಂಡವನ್ನು ಮಣಿಸಿತು.

ಸಂಕ್ಷಿಪ್ತ ಸ್ಕೋರುಗಳು: ಐಎಎಫ್‌ ಕ್ರೀಡಾಂಗಣ: ಮೋಫುಶಿಲ್‌ ಇಲೆವನ್‌: 27.4 ಓವರ್‌ಗಳಲ್ಲಿ 79 ಮತ್ತು ಎರಡನೇ ಇನಿಂಗ್ಸ್: 25.1 ಓವರ್‌ಗಳಲ್ಲಿ 69 (ಸೌರಭ್‌ ಮುತ್ತೂರ್‌ 20, ಅಭಿಲಾಷ್ ಶೆಟ್ಟಿ 13ಕ್ಕೆ 3, ಶಶಾಂಕ್‌ ಕೆ. 34ಕ್ಕೆ 6). ಸಂಯುಕ್ತ ಮೊಫುಶಿಲ್ ಇಲೆವನ್‌: 39.3 ಓವರ್‌ಗಳಲ್ಲಿ 122 ಮತ್ತು ಎರಡನೇ ಇನಿಂಗ್ಸ್: 7.3 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 27. ಫಲಿತಾಂಶ: ಸಂಯುಕ್ತ ಮೋಫುಶಿಲ್‌ ತಂಡಕ್ಕೆ 10 ವಿಕೆಟ್‌ಗಳ ಜಯ

ಚಿನ್ನಸ್ವಾಮಿ ಕ್ರೀಡಾಂಗಣ: ಬೆಂಗಳೂರು ವಲಯ: 85.3 ಓವರ್‌ಗಳಲ್ಲಿ 336. ಸಂಯುಕ್ತ ಸಿಟಿ ಇಲೆವನ್‌: 82.5 ಓವರ್‌ಗಳಲ್ಲಿ 9 ವಿಕೆಟ್‌ಗೆ 358 (ಮೊಹಮ್ಮದ್ ಎ. ಜಾವದ್‌ 39, ಜಯೇಶ್ ಬಾಬು 59, ರಿಷಿ ಬೋಪಣ್ಣ ಎಸ್‌.ಎ. 45, ಅಬುಲ್‌ ಹಸನ್‌ ಖಾಲಿದ್‌ 83, ಅಮನ್ ಖಾನ್‌ 78; ಸಂಕಲ್ಪ್ ಎಸ್‌.ಎಸ್‌. 76ಕ್ಕೆ 3, ಆದಿತ್ಯ ಗೋಯಲ್ 56ಕ್ಕೆ 2, ತನೀಷ್ ಮಹೇಶ್‌ 59ಕ್ಕೆ 2, ಆಕಾಶ್ ಭಾರದ್ವಾಜ್‌ 73ಕ್ಕೆ 2). ಫಲಿತಾಂಶ: ಪಂದ್ಯ ಡ್ರಾ

ಕಿಣಿ ಸ್ಪೋರ್ಟ್ಸ್ ಅರೆನಾ: ಬೆಂಗಳೂರು ಸಿಟಿ ಇಲೆವನ್‌: 90 ಓವರ್‌ಗಳಲ್ಲಿ 6 ವಿಕೆಟ್‌ಗೆ 330 ಮತ್ತು ಎರಡನೇ ಇನಿಂಗ್ಸ್: 18.1 ಓವರ್‌ಗಳಲ್ಲಿ 5 ವಿಕೆಟ್‌ಗೆ 77 (ರೋಹಿತ್ ಕೆ. 47, ಶ್ರೇಯಸ್‌ ಬಿ.ಎಂ. 7ಕ್ಕೆ 2), ಪ್ರೆಸಿಡೆಂಟ್ಸ್ ಇಲೆವನ್‌: 60.2 ಓವರ್‌ಗಳಲ್ಲಿ 255 (ಜಸ್ವಂತ್ ಆಚಾರ್ಯ 31, ಲೋಚನ್ ಅಪ್ಪಣ್ಣ 83, ಪ್ರಜ್ವಲ್ ಪವನ್‌ 39, ಪ್ರಜ್ವಲ್‌ ಕೃಷ್ಣ 35; ಕಾರ್ತಿಕೇಯ ವಾಧ್ವಾ 73ಕ್ಕೆ 3, ಶಾನ್‌ ತ್ರಿಸ್ತನ್‌ ಜೋಸೆಫ್‌ 41ಕ್ಕೆ 3, ಕುನಾಲ್‌ ಎಸ್‌.ಜಿ. 18ಕ್ಕೆ 2). ಫಲಿತಾಂಶ: ಪಂದ್ಯ ಡ್ರಾ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು