ಮಂಗಳವಾರ, ಮೇ 18, 2021
22 °C

ಸಿಎಸ್‌ಕೆ ವಿರುದ್ಧದ ಗೆಲುವಿನ ಬಳಿಕ ಧವನ್-ಪೃಥ್ವಿ ಡ್ಯಾನ್ಸ್ ಮೋಡಿ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು.

ಬಳಿಕ ಪಂದ್ಯದ ಹೀರೊಗಳಾದ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಡ್ಯಾನ್ಸ್ ಮಾಡುವ ಮೂಲಕ ವಿಜಯೋತ್ಸವ ಆಚರಿಸಿದ್ದಾರೆ.

ಚೆನ್ನೈ ಒಡ್ಡಿದ 189 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ತಂಡಕ್ಕೆ ಧವನ್ ಹಾಗೂ ಪೃಥ್ವಿ ಬಿರುಸಿನ ಆರಂಭವೊದಗಿಸಿದ್ದರು. ಇವರಿಬ್ಬರು ಮೊದಲ ವಿಕೆಟ್‌ಗೆ 13.3 ಓವರ್‌ಗಳಲ್ಲಿ 138 ರನ್‌ಗಳ ಜೊತೆಯಾಟ ನೀಡಿದ್ದರು.

38 ಎಸೆತಗಳನ್ನು ಎದುರಿಸಿದ್ದ ಪೃಥ್ವಿ ಒಂಬತ್ತು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 72 ರನ್ ಗಳಿಸಿದ್ದರು. ಅತ್ತ ಧವನ್ 54 ಎಸೆತಗಳಲ್ಲಿ 10 ಬೌಂಡರಿ ಹಾಗೂ ಎರಡು ಸಿಕ್ಸರ್‌‌ಗಳಿಂದ 85 ರನ್ ಪೇರಿಸಿದ್ದರು. ಈ ಮೂಲಕ ಡೆಲ್ಲಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮೂಲಕ ತಮ್ಮನ್ನು ಕಡೆಗಣಿಸುತ್ತಿರುವ ಟೀಮ್ ಇಂಡಿಯಾ ಆಯ್ಕೆಗಾರರಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದರು.

ಇದನ್ನೂ ಓದಿ: 

'ಗಬ್ಬರ್' ಖ್ಯಾತಿಯ ಶಿಖರ್ ಧವನ್, ಮೈದಾನದಲ್ಲಷ್ಟೇ ಅಲ್ಲದೆ ಮೈದಾನದ ಹೊರಗೂ ಸಹ ಆಟಗಾರರೊಂದಿಗೆ ಉತ್ತಮ ಒಡನಾಟಕ್ಕೆ ಹೆಸರುವಾಸಿಯಾಗಿದ್ದಾರೆ. ಅಲ್ಲದೆ ಯುವ ಆಟಗಾರರನ್ನು ಹುರಿದುಂಬಿಸಲು ಯಾವತ್ತೂ ಹಿಂಜರಿಯುವುದಿಲ್ಲ.

 

 

 

ಪಂದ್ಯದ ಬಳಿಕ ಪೃಥ್ವಿ ಶಾ ಜೊತೆಗೆ ಶಿಖರ್ ಧವನ್ ಡ್ಯಾನ್ಸ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ವಿಡಿಯೊವನ್ನು ಸ್ವತಃ ಧವನ್ ಅವರೇ ಹಂಚಿದ್ದಾರೆ. ಐಪಿಎಲ್ ಅಧಿಕೃತ ಟ್ವಿಟರ್‌ ಪುಟದಲ್ಲೂ ಮಗದೊಂದು ವಿಡಿಯೊವನ್ನು ಹಂಚಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು