ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡಿ: ಚಹಾಲ್ ಪತ್ನಿ ಧನಶ್ರೀ ಜೊತೆ ಶ್ರೇಯಸ್ ಅಯ್ಯರ್ ನೃತ್ಯ

Last Updated 12 ಫೆಬ್ರುವರಿ 2021, 2:41 IST
ಅಕ್ಷರ ಗಾತ್ರ

ಮುಂಬೈ: ಯಜುವೇಂದ್ರ ಚಹಾಲ್ ಪತ್ನಿ ಧನಶ್ರೀ ನೃತ್ಯದಲ್ಲಿ ಎತ್ತಿ ಕೈ ಎನ್ನುವುದು ನಮಗೆ ಗೊತ್ತೇ ಇದೆ. ಯೂಟ್ಯೂಬ್ ಇನ್‌ಸ್ಟಾಗ್ರಾಮಲ್ಲಿ ಅವರ ವಿಡಿಯೊಗಳು ಆಗಾಗ್ಗೆ ಟ್ರೆಂಡ್ ಆಗುತ್ತಿರುತ್ತವೆ. ಇದೀಗ, ಟೀಮ್ ಇಂಡಿಯಾ ಕ್ರಿಕೆಟರ ಶ್ರೇಯಸ್ ಅಯ್ಯರ್ ಧನಶ್ರೀ ಜೊತೆ ಹೆಜ್ಜೆ ಹಾಕಿದ್ದಾರೆ.

ಜಿಮ್‌ನಲ್ಲಿ ಧನಶ್ರೀ ಜೊತೆ ನೃತ್ಯ ಮಾಡಿರುವ ವಿಡಿಯೊವನ್ನು ಶ್ರೇಯಸ್ ಇನ್‌ಸ್ಟಾಗ್ರಾಮ್ ಪೋಸ್ ಮಾಡಿದ್ದು, ‘ಥಿಂಕಿಂಗ್ ಆನ್ ಅವರ್ ಫೀಟ್’ ಎಂದು ಶೀರ್ಷಿಕೆ ನೀಡಿದ್ದಾರೆ.

ಶ್ರೇಯಸ್ ಅಯ್ಯರ್ ಮತ್ತು ಧನಶ್ರೀ ನೃತ್ಯಕ್ಕೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ, ಟೀಮ್ ಇಂಡಿಯಾ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್, ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪತ್ನಿ ಪೃಥ್ವಿ ನಾರಾಯಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ಟು ಕೂಲ್ ಬ್ರೋ," ಎಂದು ಹಾರ್ದಿಕ್ ಪ್ರಶಂಸೆ ಮಾಡಿದ್ದರೆ, ತುಂಬಾ ಚೆನ್ನಾಗಿದೆ ಎಂದು ಆರ್. ಶ್ರೀಧರ್ ಹೇಳಿದ್ದಾರೆ.

ಇತ್ತೀಚೆಗೆ ಅಂತ್ಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ನಿಗದಿತ ಓವರ್‌ಗಳ ಪಂದ್ಯಗಳಲ್ಲಿ ಆಡಿದ್ದ ಶ್ರೇಯಸ್ ಅಯ್ಯರ್ ಭುಜದ ಗಾಯಕ್ಕೆ ತುತ್ತಾಗಿದ್ದು, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಿಂದ ಹೊರಗುಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT