ಗುರುವಾರ , ಫೆಬ್ರವರಿ 25, 2021
27 °C

ದಿನಕ್ಕೆ 1,500 ಶಾರ್ಟ್ ಪಿಚ್ ಎಸೆತ: ಗಿಲ್ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ತಂದೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಭಾರತ ಅಮೋಘ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್, ಬ್ಯಾಕ್‌ಫೂಟ್‌ ಹೊಡೆತಗಳಿಂದ ಗಮನ ಸೆಳೆದಿದ್ದರು. ಇದೀಗ, ಅವರ ತಂದೆ ಲಖ್ವಿಂದರ್ ಸಿಂಗ್, ಗಿಲ್ ಅವರ ಯಶಸ್ಸಿನ ಹಿಂದಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

ದಿನಕ್ಕೆ 1,500 ಶಾರ್ಟ್ ಪಿಚ್ ಎಸೆತಗಳನ್ನು ಎದುರಿಸುವ ಮೂಲಕ ಅವನು ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಂಡಿದ್ದಾನೆ. ಆಗಾಗ್ಗೆ, ಒಂದು ಕ್ರಿಕೆಟ್ ಸ್ಟಂಪ್ ಅನ್ನು ಬ್ಯಾಟ್ ಆಗಿಯೂ ಬಳಸುತ್ತಿದ್ದನು ಎಂದು ಗಿಲ್ ತಂದೆ ಹೇಳಿದ್ದಾರೆ.

21 ರ ಹರೆಯದ ಶುಭಮನ್ ಗಿಲ್, ಮೆಲ್ಬೋರ್ನ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು, ಸಿಡ್ನಿಯಲ್ಲಿ ತಮ್ಮ ಚೊಚ್ಚಲ ಅರ್ಧಶತಕವನ್ನು ಸಿಡಿಸಿದರು. ಬ್ರಿಸ್ಬೇನ್‌ನಲ್ಲಿ ಅಮೋಘ 91 ರನ್ ಗಳಿಸಿ ಭಾರತದ 2-1 ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

"ಅವನು 9 ವರ್ಷದವನಿದ್ದಾಗಿನಿಂದಲೂ ಶಾರ್ಟ್ ಪಿಚ್ ಎಸೆತಗಳನ್ನು ಎದುರಿಸುವುದನ್ನು ಕಲಿಸಿದೆ," ಎಂದು ಗಿಲ್ ತಂದೆ ಲಖ್ವಿಂದರ್ ಸಿಂಗ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

"ಚಾರ್ಪಾಯ್ ಮೇಲೆ ಬಿದ್ದ ಚೆಂಡು ವೇಗವಾಗಿ ಚಲಿಸುತ್ತದೆ. ಈ ಸಂದರ್ಭ ಅವನು ಸ್ಟಂಪ್ ಅನ್ನೇ ಬ್ಯಾಟ್ ರೀತಿ ಬಳಸುತ್ತಿದ್ದನು. ಹಾಗಾಗಿ, ಬ್ಯಾಟ್ ಮಧ್ಯಭಾಗದಿಂದ ಚೆಂಡನ್ನು ಹೊಡೆಯುವುದರ ಅಭ್ಯಾಸ ಮಾಡಲು ಸಾಧ್ಯವಾಯಿತು," ಎಂದು ಸಿಂಗ್ ಹೇಳುತ್ತಾರೆ.

ಗಿಲ್ ಅವರ ಕುಟುಂಬವು ಉತ್ತಮ ಕ್ರಿಕೆಟ್ ತರಬೇತಿ ಸೌಲಭ್ಯಗಳಿಗಾಗಿ ಪಂಜಾಬ್‌ನ ಹಳ್ಳಿಯಿಂದ 300 ಕಿ.ಮೀ ದೂರದ ಮೊಹಾಲಿಗೆ ಸ್ಥಳಾಂತರವಾಗಿತ್ತು.

ಶಾರ್ಟ್-ಪಿಚ್ ಎಸೆತಗಳಿಗೆ ಹೊಂದಿಕೊಳ್ಳಲು ಅನುಕೂಲವಾಗುವಂತೆ ಸಿಂಗ್ ತಮ್ಮ ಮಗನನ್ನು ಕಾಯಿರ್ ಅಥವಾ ಕ್ಯಾನ್ವಾಸ್ ಮ್ಯಾಟ್ ಪಿಚ್‌ಗಳ ಮೇಲೆ ಅಭ್ಯಾಸ ಮಾಡಿಸಿದ್ದಾರೆ.

"ಮ್ಯಾಟಿಂಗ್ ಒದಗಿಸುವ ಹೆಚ್ಚುವರಿ ಬೌನ್ಸ್ ನಿಮ್ಮನ್ನು ಸರಿಯಾದ ಸ್ಥಾನಕ್ಕೆ ಪ್ರೇರೇಪಿಸುತ್ತದೆ. "ಮ್ಯಾಟಿಂಗ್ ಪಿಚ್‌ಗಳಲ್ಲಿ ಆಡಿದ ಬ್ಯಾಟ್ಸ್‌ಮನ್‌ಗಳು ಬ್ಯಾಕ್‌ಫೂಟ್‌ನಲ್ಲಿ ಆಡುವ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಾರೆ, ಇದು ಯಾವುದೇ ಉನ್ನತ ಮಟ್ಟದ ಕ್ರಿಕೆಟ್‌ಗೆ ಅವಶ್ಯಕವಾಗಿದೆ." ಎಂದು ಸಿಂಗ್ ಹೇಳುತ್ತಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು