ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಕ್ಸ್ ಕ್ರಿಕೆಟ್ ಅಕಾಡೆಮಿಯಿಂದ ಪ್ರತಿಭಾಶೋಧ 14ರಿಂದ

Published 11 ಜನವರಿ 2024, 13:54 IST
Last Updated 11 ಜನವರಿ 2024, 13:54 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಬೆಂಗಳೂರು: ನಗರದ ಸಿಕ್ಸ್ ಕ್ರಿಕೆಟ್ ಅಕಾಡೆಮಿಯು ರಾಜ್ಯದಾದ್ಯಂತ ಇದೇ 14ರಿಂದ 21ರವರೆಗೆ ಪ್ರತಿಭಾಶೋಧ ಕಾರ್ಯಕ್ರಮ ಹಮ್ಮಿಕೊಂಡಿದೆ.

ಉದಯೋನ್ಮುಖ ಕ್ರಿಕೆಟಿಗರಿಗಾಗಿ (ಬಾಲಕ ಮತ್ತು ಬಾಲಕಿಯರು) ಪ್ರತಿಭಾನ್ವೇಷಣೆ ಕಾರ್ಯಕ್ರಮದ ಎರಡನೇ ಆವೃತ್ತಿಯನ್ನು ಕರ್ನಾಟಕದಲ್ಲಿ ನಡೆಸಲು ಸಿಕ್ಸ್ ಕ್ರಿಕೆಟ್ ಅಕಾಡೆಮಿ ಸಜ್ಜಾಗಿದೆ. 14, 16, 23 ವರ್ಷದೊಳಗಿನ ಬಾಲಕ, ಬಾಲಕಿಯರು, ಸೀನಿಯರ್ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಪ್ರತಿಭೆಗಳ ಅನ್ವೇಷಣೆ ನಡೆಲಾಗುತ್ತಿದೆ ಎಂದು ಅಕಾಡೆಮಿಯ ನಿರ್ದೇಶಕ ಮತ್ತು ಕೋಚ್ ಕಾರ್ತಿಕ್ ಜೆಶ್ವಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಅಕಾಡೆಮಿಯು ನಗರದ ಪ್ರಕಾಶ್ ಪಡುವಕೋಣೆ–ರಾಹುಲ್ ದ್ರಾವಿಡ್ ಸ್ಪೋರ್ಟ್ಸ್‌ ಎಕ್ಸಲೆನ್ಸಿಯಲ್ಲಿದೆ.

ವೆಬ್‌ಸೈಟ್ ಮೂಲಕ (www.sixcricket.in) ಹೆಸರು ನೋಂದಾಯಿಸಬೇಕು. ವಿವರಗಳಿಗೆ ಸಂಪರ್ಕಿಸಿ: 957910 50734.

ಪ್ರತಿಭಾನ್ವೆಷಣೆ ನಡೆಯುವ ಸ್ಥಳಗಳು;

ಸಿಕ್ಸ್ ಕ್ರಿಕೆಟ್ ಅಕಾಡೆಮಿ, ಬೆಂಗಳೂರು (ಜ.14), ಗೇಮ್ಸ್ ಕ್ರಿಕೆಟ್ ಅಕಾಡೆಮಿ, ಮೈಸೂರು (ಜ.16), 22 ಯಾರ್ಡ್ಸ್‌ ಸ್ಕೂಲ್ ಆಫ್ ಕ್ರಿಕೆಟ್, ಮಂಗಳೂರು (ಜ.17), ನವುಲೆ, ಶಿವಮೊಗ್ಗ (ಜ.18), ಬಿಡಿಕೆ ಮೈದಾನ  ಹುಬ್ಬಳ್ಳಿ (ಜ.20), ಎಲ್‌ವಿಡಿ ಕಾಲೇಜು ಮೈದಾನ, ರಾಯಚೂರು (ಜ.21) 

ಸಮಯ: ಬೆಳಿಗ್ಗೆ 8ರಿಂದ 12.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT