ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಸ್ಮೃತಿ ಮಂದಾನಗೆ ಐಸಿಸಿ ವರ್ಷದ ಆಟಗಾರ್ತಿ ಗೌರವ

Last Updated 24 ಜನವರಿ 2022, 11:12 IST
ಅಕ್ಷರ ಗಾತ್ರ

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ವರ್ಷದ ಆಟಗಾರ್ತಿ ಗೌರವಕ್ಕೆ ಭಾರತ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಪಾತ್ರರಾಗಿದ್ದಾರೆ. 2021ನೇ ಸಾಲಿನಲ್ಲಿ ಎಲ್ಲ ಮಾದರಿಯ ಕ್ರಿಕಟ್‌ನಲ್ಲಿ ಗಳಿಸಿದ ರನ್‌ ಆಧಾರದಲ್ಲಿ ಅವರಿಗೆ ಈ ಗೌರವ ಸಂದಿದೆ.

ಐಸಿಸಿಯ ಉನ್ನತ ಗೌರವಕ್ಕೆ ಮಂದಾನ, ರಾಚೆಲ್ ಹೇಹೋ ಫ್ಲಿಂಟ್, ತಮ್ಸಿನ್ ಬ್ಯೂಮಾಂಟ್, ಲಿಜೆಲ್ಲೆ ಲೀ, ಗೇಬಿ ಲೆವಿಸ್ ನಾಮನಿರ್ದೇಶನಗೊಂಡಿದ್ದರು ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.

2021ರಲ್ಲಿ ಭಾರತ ತಂಡವು ಕಠಿಣ ಪರಿಸ್ಥಿಯನ್ನು ಎದುರಿಸಿದ್ದರೂ ಮಂದಾನ ಅವರ ರನ್ ಗಳಿಕೆ ಏರುಮುಖವಾಗಿತ್ತು.

ನಿಗದಿತ ಓವರ್‌ಗಳ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಸರಣಿಯಲ್ಲಿ ಭಾರತದ ಗೆಲುವಿನಲ್ಲಿ ಮಂದಾನ ಪ್ರಮುಖ ಪಾತ್ರ ವಹಿಸಿದ್ದರು. ಎರಡನೇ ಏಕದಿನದಲ್ಲಿ 158 ರನ್ ಗುರಿ ಬೆನ್ನತ್ತಿದ್ದಾಗ ಮಂದಾನ 80 ರನ್ ಗಳಿಸಿದ್ದರು. ಟ್ವೆಂಟಿ–20 ಫೈನಲ್‌ನಲ್ಲಿ ಅಜೇಯ 48 ರನ್ ಗಳಿಸಿ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದ್ದರು.

ಇಂಗ್ಲೆಂಡ್ ವಿರುದ್ಧ ಡ್ರಾದಲ್ಲಿ ಕೊನೆಗೊಂಡಿದ್ದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅವರು 78 ರನ್ ಗಳಿಸಿದ್ದರು.

ಭಾರತ ತಂಡವು ಆಡಿದ್ದ ಮೊದಲ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಶತಕ ಬಾರಿಸುವ ಮೂಲಕ ಮಂದಾನ ಗಮನ ಸೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT