ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಫಿಟ್‌ನೆಸ್ ನಿರ್ವಹಣೆಯಿಂದ ವೇಗದ ಬೌಲಿಂಗ್‌ನಲ್ಲಿ‌ ಪ್ರಗತಿ: ಸೌರವ್‌ ಗಂಗೂಲಿ

Last Updated 6 ಜುಲೈ 2020, 14:00 IST
ಅಕ್ಷರ ಗಾತ್ರ

ನವದೆಹಲಿ:ಭಾರತ ತಂಡವು ವಿಶ್ವಶ್ರೇಷ್ಠ ವೇಗದ ಬೌಲಿಂಗ್‌ ದಾಳಿ ಹೊಂದಲು ಸುಧಾರಿತ ಫಿಟ್‌ನೆಸ್‌ ಮಾನದಂಡಗಳು ಕಾರಣವಾಗಿವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡವು ಸ್ಪಿನ್‌ ಬೌಲಿಂಗ್‌ ಮೇಲೆ ಹೊಂದಿದ್ದ ಸಾಂಪ್ರದಾಯಿಕ ನೆಚ್ಚುಗೆಯನ್ನು ಬದಲಾಯಿಸುವಲ್ಲಿ ನೆರವಾದ ಐವರು ವೇಗಿಗಳಲ್ಲಿ ಮೊಹಮ್ಮದ್‌ ಶಮಿ ಹಾಗೂ ಜಸ್‌ಪ್ರೀತ್‌ ಬುಮ್ರಾ ಅವರೂ ಇದ್ದಾರೆ.

‘ಭಾರತ ತಂಡದಲ್ಲಿ ಸಂಪ್ರದಾಯ ಈಗ ಬದಲಾಗಿದೆ. ನಾವು ಕೂಡ ಶ್ರೇಷ್ಠ ವೇಗಿಗಳನ್ನು ಹೊಂದಲು ಸಾಧ್ಯವಾಗಿದೆ. ಫಿಟ್‌ನೆಸ್‌ ನಿರ್ವಹಣೆ ಹಾಗೂ ಅದರ ಮಾನದಂಡಗಳು ಬೌಲರ್‌ಗಳಲ್ಲಷ್ಟೇ ಅಲ್ಲದೆ ಬ್ಯಾಟ್ಸ್‌ಮನ್‌ಗಳಲ್ಲೂ ಬಹಳಷ್ಟು ಬದಲಾವಣೆ ತರಲು ಕಾರಣವಾಗಿವೆ’ ಎಂದು ಬಿಸಿಸಿಐ ಆಯೋಜಿಸಿದ್ದ ಟ್ವಿಟರ್‌ ಸಂವಾದದಲ್ಲಿ ಅವರು ತಿಳಿಸಿದ್ದಾರೆ.

1970–80ರ ದಶಕದಲ್ಲಿ ವೆಸ್ಟ್‌ ಇಂಡೀಸ್‌ ತಂಡದ ವೇಗದ ಬೌಲಿಂಗ್ ವಿಭಾಗವು‌ ವಿಶ್ವ ಕ್ರಿಕೆಟ್‌ನಲ್ಲಿ ಪಾರಮ್ಯ ಸಾಧಿಸಿತ್ತು. ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಾದ ಮೈಕೆಲ್‌ ಹೋಲ್ಡಿಂಗ್‌, ಆ್ಯಂಡಿ ರಾಬರ್ಟ್ಸ್‌, ಮಾಲ್ಕಮ್‌ ಮಾರ್ಷಲ್‌ ಮತ್ತು ಜೋಯಲ್‌ ಗಾರ್ನರ್‌ ಅವರು ಎದುರಾಳಿಗಳ ಎದೆ ನಡುಗಿಸುತ್ತಿದ್ದರು.

ಇತ್ತೀಚೆಗೆ ಭಾರತದ ವೇಗಿಗಳಾದ ಶಮಿ, ಬೂಮ್ರಾ, ಇಶಾಂತ್ ಶರ್ಮಾ, ಉಮೇಶ್‌ ಯಾದವ್‌ ಹಾಗೂ ಭುವನೇಶ್ವರ ಕುಮಾರ್‌ ವಿಶ್ವ ಕ್ರಿಕೆಟ್‌ನಲ್ಲಿ ಪ್ರಮುಖ ಬೌಲರ್‌ಗಳಾಗಿ ಪ್ರಗತಿ ಕಂಡಿದ್ದಾರೆ.

‘ನಾನು ಕ್ರಿಕೆಟ್‌ ಆಡುವ ವೇಳೆ ವೆಸ್ಟ್‌ ಇಂಡೀಸ್‌ ತಂಡದ ಆಟಗಾರರು ದೈಹಿಕವಾಗಿ ಬಲಿಷ್ಠರಾಗಿದ್ದರು. ಆದರೆ ನಾವು ಹಾಗಿರಲಿಲ್ಲ; ದೇಹವನ್ನು ದಂಡಿಸಿ ಬಲಿಷ್ಠರಾಗುತ್ತಿದ್ದೆವು’ ಎಂದು ಗಂಗೂಲಿ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT