ಮಂಗಳವಾರ, ಜನವರಿ 26, 2021
18 °C

South Africa VS Sri Lanka| ದಕ್ಷಿಣ ಆಫ್ರಿಕಾಗೆ ಸರಣಿ ಕಿರೀಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜೋಹಾನ್ಸ್‌ಬರ್ಗ್: ಕ್ವಿಂಟನ್ ಡಿ ಕಾಕ್ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡವು ಮಂಗಳವಾರ ಶ್ರೀಲಂಕಾ ಎದುರಿನ ಟೆಸ್ಟ್‌ನಲ್ಲಿ 10 ವಿಕೆಟ್‌ಗಳಿಂದ ಗೆದ್ದು, 2–0ಯಿಂದ ಸರಣಿ ಜಯಿಸಿತು.

ಶ್ರೀಲಂಕಾ ತಂಡವು ಕೊಟ್ಟಿದ್ದ 66 ರನ್‌ಗಳ ಸುಲಭದ ಗುರಿಯನ್ನು ದಕ್ಷಿಣ ಆಫ್ರಿಕಾ ತಂಡವು ನಿರಾಯಾಸವಾಗಿ ಮುಟ್ಟಿತು. ಲಂಕಾ ತಂಡದ ದಿಮುತ ಕರುಣಾರತ್ನ (103; 128ಎ) ಅವರ ಶತಕದ ಆಟವು ವ್ಯರ್ಥವಾಯಿತು. ಆತಿಥೇಯ ಬಳಗದ ವೇಗಿ ಲುಂಗಿ ಗಿಡಿ ಮತ್ತು ಎನ್ರಿಚ್ ನಾಕಿಯಾ ಅವರು ಮೇಲುಗೈ ಸಾಧಿಸಿದರು.

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್: 40.3 ಓವರ್‌ಗಳಲ್ಲಿ 157, ದಕ್ಷಿಣ ಆಫ್ರಿಕಾ: 75.4 ಓವರ್‌ಗಳಲ್ಲಿ 302 (ಡೀನ್ ಎಲ್ಗರ್ 127, ವ್ಯಾನ್ ಡರ್ ಡಸೆ 67, ವಿಶ್ವ ಫರ್ನಾಂಡೊ 101ಕ್ಕೆ5) ಎರಡನೇ ಇನಿಂಗ್ಸ್: ಶ್ರೀಲಂಕಾ: 56.5 ಓವರ್‌ಗಳಲ್ಲಿ 211 (ದಿಮುತ ಕರುಣಾರತ್ನೆ 103, ತಿರಿಮಾನೆ 31, ಡಿಕ್ವೆಲಾ 36, ಲುಂಗಿ ಗಿಡಿ 44ಕ್ಕೆ4, ಎನ್ರಿಚ್ ನಾಕಿಯಾ 64ಕ್ಕೆ2,  ಸಿಪಾಮ್ಲಾ 40ಕ್ಕೆ3), ದಕ್ಷಿಣ ಆಫ್ರಿಕಾ:13.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 67 (ಏಡನ್ ಮರ್ಕರಂ ಔಟಾಗದೆ 36, ಡೀನ್ ಎಲ್ಗರ್ ಔಟಾಗದೆ 31) ಫಲಿತಾಂಶ:ದಕ್ಷಿಣ ಆಫ್ರಿಕಾ ತಂಡಕ್ಕೆ 10 ವಿಕೆಟ್‌ಗಳ ಜಯ.  2–0ಯಿಂದ ಸರಣಿ ಜಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು