ಮಂಗಳವಾರ, ಮೇ 26, 2020
27 °C

ಏಕದಿನ ಕ್ರಿಕೆಟ್‌ ಸರಣಿ: ಭಾರತಕ್ಕೆ ಬಂದ ದಕ್ಷಿಣ ಆಫ್ರಿಕಾ ತಂಡ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕ್ವಿಂಟನ್‌ ಡಿ ಕಾಕ್‌ ನೇತೃತ್ವದ ದಕ್ಷಿಣ ಆಫ್ರಿಕಾ ತಂಡದವರು ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯನ್ನು ಆಡಲು ಸೋಮವಾರ ಭಾರತಕ್ಕೆ ಬಂದಿದ್ದಾರೆ.

ನವದೆಹಲಿಗೆ ಬಂದಿಳಿದ ತಂಡವು ಅಲ್ಲಿಂದ ಧರ್ಮಶಾಲಾಕ್ಕೆ ಪ್ರಯಾಣಿಸಿದೆ. ಭಾರತ ತಂಡದವರು ಮಂಗಳವಾರ ಧರ್ಮಶಾಲಾಕ್ಕೆ ತೆರಳಲಿದ್ದಾರೆ. ಉಭಯ ತಂಡಗಳ ನಡುವಣ ಮೊದಲ ಏಕದಿನ ಪಂದ್ಯ ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿದೆ.

ಕೇಂದ್ರೀಯ ಗುತ್ತಿಗೆ ಒಪ್ಪಂದದಲ್ಲಿ ಸ್ಥಾನ ಪಡೆದಿರುವ ಭಾರತದ ಪ್ರಮುಖ ಆಟಗಾರರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ (ಎನ್‌ಸಿಎ)  ವೈದ್ಯಕೀಯ ಪರೀಕ್ಷೆಗೆ ಒಳಗಾಗಲಿದ್ದಾರೆ.

ಕೈಕುಲುಕುವುದಿಲ್ಲ: ‘ಭಾರತದಲ್ಲಿ ಇದ್ದಷ್ಟು ದಿನ ನಮ್ಮ ಆಟಗಾರರು ಯಾರಿಗೂ ಹಸ್ತಲಾಘವ ನೀಡುವುದಿಲ್ಲ’ ಎಂದು ದಕ್ಷಿಣ ಆಫ್ರಿಕಾ ತಂಡದ  ಮುಖ್ಯ ಕೋಚ್‌ ಮಾರ್ಕ್‌ ಬೌಷರ್‌ ತಿಳಿಸಿದ್ದಾರೆ.

‘ಈಗ ಎಲ್ಲೆಡೆಯೂ ಕೋವಿಡ್‌–19 ವೈರಸ್‌ ಹರಡುತ್ತಿದೆ. ಕೋವಿಡ್‌ ಸೋಂಕು ನಮ್ಮ ಆಟಗಾರರಿಗೂ ತಗಲುವ ಅಪಾಯವಿದೆ. ಆಟಗಾರರ ಸುರಕ್ಷತೆ ಬಹಳ ಮುಖ್ಯ.  ಪ್ರವಾಸದ ವೇಳೆ ಯಾರಿಗೂ ಹಸ್ತಲಾಘವ ನೀಡದಂತೆ ವೈದ್ಯಕೀಯ ತಂಡದವರು ತಿಳಿಸಿದ್ದಾರೆ. ಅವರ ಸಲಹೆಯನ್ನು ನಾವೆಲ್ಲಾ ಪಾಲಿಸಬೇಕು’ ಎಂದಿದ್ದಾರೆ.

ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್‌ ಡಿ ಕಾಕ್‌ (ನಾಯಕ ಮತ್ತು ವಿಕೆಟ್‌ ಕೀಪರ್‌), ತೆಂಬಾ ಬವುಮಾ, ವ್ಯಾನ್‌ ಡರ್‌ ಡುಸನ್‌, ಫಾಫ್‌ ಡು ಪ್ಲೆಸಿ, ಕೈಲ್‌ ವೆರ‍್ರಿನ್‌, ಹೆನ್ರಿಕ್‌ ಕ್ಲಾಸೆನ್‌, ಡೇವಿಡ್‌ ಮಿಲ್ಲರ್‌, ಜಾನ್‌ ಜಾನ್‌ ಸ್ಮಟ್ಸ್‌, ಆ್ಯಂಡಿಲೆ ಪಿಶುವಾಯೊ, ಲುಂಗಿ ಗಿಡಿ, ಲುಥೊ ಸಿಪಾಮ್ಲಾ, ಬ್ಯೂರನ್‌ ಹೆನ್ರಿಕ್ಸ್‌, ಎನ್ರಿಚ್‌ ನೋರ್ಟ್ಜೆ, ಜಾರ್ಜ್‌ ಲಿಂಡ್‌, ಕೇಶವ್‌ ಮಹಾರಾಜ್‌ ಹಾಗೂ ಜನ್ನೆಮನ್‌ ಮಲಾನ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು