ಕೇಪ್‌ಟೌನ್ : ಇಂಗ್ಲೆಂಡ್ ವಿರುದ್ಧ ನಾಲ್ಕು ಟೆಸ್ಟ್‌ಗಳ ಸರಣಿ ಆಡಲಿರುವ ದಕ್ಷಿಣ ಆಫ್ರಿಕಾ ಮೊದಲ ಎರಡು ತಂಡಗಳಿಗೆ ತಂಡವನ್ನು ಪ್ರಕಟಿಸಿದೆ. 17 ಆಟಗಾರರ ತಂಡದಲ್ಲಿ ಆರು ಮಂದಿ ಹೊಸಬರಿಗೆ ಅವಕಾಶ ನೀಡಲಾಗಿದೆ.

ಹಿರಿಯರ ನಿವೃತ್ತಿ ಮತ್ತು ಗಾಯಾಳು ಸಮಸ್ಯೆಯಿಂದ ಪರದಾಡುತ್ತಿರುವ ಈ ತಂಡಕ್ಕೆ ನವೋಲ್ಲಾಸ ನೀಡುವ ಜವಾಬ್ದಾರಿ ವಹಿಸಿಕೊಂಡಿರುವ ಮಾರ್ಕ್ ಬೌಷರ್ ಅವರಿಗೆ ಕೋಚ್ ಆಗಿ ಇದು ಮೊದಲ ಸರಣಿ.

ದಕ್ಷಿಣ ಆಫ್ರಿಕಾ ಆಡಿರುವ ಕೊನೆಯ ಐದೂ ಟೆಸ್ಟ್‌ಗಳಲ್ಲಿ ಸೋಲನುಭವಿಸಿದೆ. ಹಾಶಿಂ ಆಮ್ಲ ಮತ್ತು ಡೇಲ್ ಸ್ಟೇನ್ ನಿವೃತ್ತಿ ನಂತರ ತಂಡ ಕಟ್ಟುವ ಹೊಣೆ ಬೌಷರ್ ಅವರಿಗೆಎದುರಾಗಿದೆ.

ಪ್ರಿಟೋರಿಯಾದಲ್ಲಿ ಮೊದಲ ಟೆಸ್ಟ್ ಇದೇ 26ರಂದು ಆರಂಭವಾಗಲಿದೆ.

ಬ್ಯಾಟ್ಸ್‌ಮನ್ ಪೀಟರ್ ಮಲಾನ್, ಲೆಗ್ ಸ್ಪಿನ್ನರ್ ರಸಿ ವಾನ್‌ಡರ್ ಡಸೆನ್, ವೇಗದ ಬೌಲರ್‌ಗಳಾದ ಡೇನ್ ಪೀಟರ್‌ಸನ್ ಮತ್ತು ಬ್ಯೂರನ್ ಹೆಂಡ್ರಿಕ್ಸ್, ಆಲ್‌ರೌಂಡರ್ ಡ್ವೇನ್ ಪ್ರಿಟೋರಿಯಸ್ ಮತ್ತು ವಿಕೆಟ್ ಕೀಪರ್ ರೂಡಿ ಸೆಕೆಂಡ್ ಅವರು ತಂಡದಲ್ಲಿರುವ ಆರು ಹೊಸಬರು.

ತಂಡ: ಫಾಫ್ ಡುಪ್ಲೆಸಿ (ನಾಯಕ), ತೆಂಬಾ ಬವುಮಾ, ಕ್ವಿಂಟನ್ ಡಿಕಾಕ್, ಡೀನ್ ಎಲ್ಗರ್, ಬ್ಯುರನ್ ಹೆಂಡ್ರಿಕ್ಸ್, ಕೇಶವ್ ಮಹಾರಾಜ್, ಮರ್ಕರಮ್, ಜುಬೇರ್ ಹಂಝಾ, ಅನ್ರಿಜ್ ನೋರ್ಟ್ಯೆ, ಡೇನ್ ಪೀಟರ್‌ಸನ್, ಅ್ಯಂಡಿಲೆ ಪಿಶುವಾಯು, ಫಿಲ್ಯಾಂಡರ್, ಡ್ವೇನ್ ಪ್ರಿಟೋರಿಯಸ್,ರಬಾಡ, ರೂಡಿ ಸೆಕೆಂಡ್, ರಸಿ ವಾನ್‌ಡರ್ ಡಸೆನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.