ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ತಂಡವು ಇಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ಎದುರಿನ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿದೆ.
ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಗುರುವಾರ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 320 ರನ್ ಗಳಿಸಿ ಆಲೌಟ್ ಆಯಿತು. ಬಳಿಕ ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡವನ್ನು 251 ರನ್‌ಗಳಿಗೆ ನಿಯಂತ್ರಿಸಿತು. ಆತಿಥೇಯ ತಂಡ 69 ರನ್‌ಗಳ ಮುನ್ನಡೆ ಸಾಧಿಸಿತು.
ವೆಸ್ಟ್ ಇಂಡೀಸ್ ತಂಡದ ಜೇಸನ್ ಹೋಲ್ಡರ್ (ಔಟಾಗದೆ 81, 117 ಎ, 4X8, 6X4) ಹೊರತುಪಡಿಸಿ ಬಹುತೇಕ ಆಟಗಾರರು ರನ್ ಗಳಿಸಲು ವಿಫಲರಾದರು. ರಾಸ್ಟನ್ ಚೇಸ್ (28), ಕೈಲ್ ಮೇಯರ್ಸ್ (29) ಮತ್ತು ಜೋಷುವಾ ಡ ಸಿಲ್ವಾ (26) ಅಲ್ಪ ಕೊಡುಗೆ ನೀಡದಿದ್ದರೆ ತಂಡವು 200ರೊಳಗೆ ಕುಸಿಯುವ ಸಾಧ್ಯತೆಯಿತ್ತು.
ದಕ್ಷಿಣ ಆಫ್ರಿಕಾ ಬೌಲರ್‌ಗಳಾದ ಕಗಿಸೊ ರಬಾಡ (19ಕ್ಕೆ 2), ಗೆರಾಲ್ಡ್ ಕೊಯಟ್‌ಜಿ (41ಕ್ಕೆ 3) ಮತ್ತು ಸೈಮನ್ ಹರ್ಮರ್ (63ಕ್ಕೆ 2) ಅವರು ಪ್ರವಾಸಿ ತಂಡದ ಬ್ಯಾಟರ್‌ಗಳನ್ನು ನಿಯಂತ್ರಿಸಿದರು.
ಎರಡನೇ ಇನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿದೆ. ಡೀನ್ ಎಲ್ಗರ್ (ಬ್ಯಾಟಿಂಗ್ 3) ಮತ್ತು ಏಡನ್ ಮರ್ಕರಂ (ಬ್ಯಾಟಿಂಗ್ 1) ಕ್ರೀಸ್‌ನಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ಸದ್ಯ ಒಟ್ಟು 73 ರನ್‌ಗಳ ಮುನ್ನಡೆಯಲ್ಲಿದೆ.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ದಕ್ಷಿಣ ಆಫ್ರಿಕಾ: 92.2 ಓವರ್‌ಗಳಲ್ಲಿ 320 (ಡೀನ್ ಎಲ್ಗರ್ 42, ಏಡನ್ ಮರ್ಕರಂ 96, ಟೋನಿ ಡಿ ಜಾರ್ಜಿ 85; ಗುಡಕೇಶ್ ಮೋಟೀ 75ಕ್ಕೆ3, ಅಲ್ಜರಿ ಜೋಸೆಫ್ 60ಕ್ಕೆ 3, ಕೈಲ್ ಮೇಯರ್ಸ್ 32ಕ್ಕೆ 3). ವೆಸ್ಟ್ ಇಂಡೀಸ್: 79.3 ಓವರ್‌ಗಳಲ್ಲಿ 251 (ರಾಸ್ಟನ್ ಚೇಸ್ 28, ಕೈಲ್ ಮೇಯರ್ಸ್ 29, ಜೇನ್ ಹೋಲ್ಡರ್ ಔಟಾಗದೆ 81, ಜೋಷುವಾ ಡ ಸಿಲ್ವಾ 26; ಕಗಿಸೊ ರಬಾಡ 19ಕ್ಕೆ 2, ಗೆರಾಲ್ಡ್ ಕೊಯಟ್‌ಜಿ 41ಕ್ಕೆ 3, ಸೈಮನ್ ಹರ್ಮರ್ 63ಕ್ಕೆ 2). ಎರಡನೇ ಇನಿಂಗ್ಸ್: ದಕ್ಷಿಣ ಆಫ್ರಿಕಾ: 3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 4 (ಡೀನ್ ಎಲ್ಗರ್ ಬ್ಯಾಟಿಂಗ್ 3, ಏಡನ್ ಮರ್ಕರಂ ಬ್ಯಾಟಿಂಗ್ 1).
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.