ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯದ ಗುಂಗಿನಲ್ಲಿ 111 ಬಾಲ್‌ಗೆ 175ರನ್‌ ಸಿಡಿಸಿದ್ದ ಗಿಬ್ಸ್‌!

Last Updated 13 ಮಾರ್ಚ್ 2020, 16:11 IST
ಅಕ್ಷರ ಗಾತ್ರ

ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ ಹರ್ಷಲ್‌ ಗಿಬ್ಸ್‌ ಅವರು ಏಕದಿನ ಪಂದ್ಯದ ತಮ್ಮ ಸರ್ವಶ್ರೇಷ್ಠ ಇನ್ನಿಂಗ್ಸ್‌ ಮೂಡಿ ಬಂದಿದ್ದರ ಬಗ್ಗೆ ಆತ್ಮ ಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.

ರಾತ್ರಿ ಪೂರ ಕುಡಿದು ಮರುದಿನ ಫೀಲ್ಡ್‌ಗಿಳಿದು ಅದೇ ಗುಂಗಿನಲ್ಲಿ (ಹ್ಯಾಂಗ್‌ಓವರ್‌)ನಲ್ಲಿ ತಮ್ಮ ಕ್ರಿಕೆಟ್‌ ಜೀವನದ ಅತ್ಯಧಿಕ ಸ್ಕೋರ್‌ ದಾಖಲಿಸಿದ್ದಾಗಿ ಅವರು ಬರೆದುಕೊಂಡಿದ್ದಾರೆ.

2006ರ ಮಾರ್ಚ್‌ 12 ರಂದು ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಏಕದಿನ ಪಂದ್ಯವಾಡಿತ್ತು. ಮೊದಲು ಬ್ಯಾಟ್‌ ಮಾಡಿದ್ದ ಆಸ್ಟ್ರೇಲಿಯಾ ಗೆಲ್ಲಲು ದಕ್ಷಿಣ ಆಫ್ರಿಕಾಕ್ಕೆ 434ರನ್‌ಗಳ ಬೃಹತ್‌ ಮೊತ್ತದ ಗುರಿ ನೀಡಿತ್ತು. ಅಸಾಧ್ಯ ಎನಿಸುವ ಗುರಿಯನ್ನು ಮುಂದಿಟ್ಟುಕೊಂಡು ಆರಂಭಿಕರಾಗಿ ಫಿಲ್ಡ್‌ಗಿಳಿದ ಗಿಬ್ಸ್‌ 111 ಬಾಲ್‌ಗಳಿಗೆ 175ರನ್‌ಗಳನ್ನು ಚಚ್ಚಿದ್ದರು. ಅಸಾಧ್ಯ ಚೇಸಿಂಗ್‌ ಅನ್ನು ಯಶಸ್ವಿಯಾಗುವಂತೆ ಮಾಡಿದ್ದರು.

’ಏಕದಿನ ಪಂದ್ಯ ಆಡುವ ಹಿಂದಿನ ರಾತ್ರಿ ಕಂಠಪೂರ್ತಿ ಕುಡಿದಿದ್ದೆ. ಮದ್ಯದ ಗುಂಗಿನಲ್ಲೇ ಬ್ಯಾಟಿಂಗ್‌ ಆಡಲು ಫೀಲ್ಡ್‌ಗೆ ಇಳಿದಿದ್ದೆ’ ಎಂದು ಅವರು ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT