ಶುಕ್ರವಾರ, ಏಪ್ರಿಲ್ 10, 2020
19 °C

ಐಪಿಎಲ್–2020 ಹಣೆಬರಹ ಏಪ್ರಿಲ್ 15ರ ಬಳಿಕ ನಿರ್ಧಾರ: ಕ್ರೀಡಾ ಸಚಿವ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾ ವೈರಸ್‌ನಿಂದ ಉಂಟಾಗಿರುವ ಪರಿಸ್ಥಿತಿಯನ್ನು ಗಮನದಲ್ಲಿರಿಸಿ ಐಪಿಎಲ್‌ 13ನೇ ಆವೃತ್ತಿಗೆ ಸಂಬಂಧಿಸಿದ ಹೊಸ ನಿರ್ದೇಶನಗಳನ್ನು ಏಪ್ರಿಲ್‌ 15ರ ನಂತರ ಪ್ರಕಟಿಸಲಾಗುವುದು ಎಂದು ಕ್ರೀಡಾ ಸಚಿವ ಕಿರಣ್‌ ರಿಜುಜು ತಿಳಿಸಿ‌ದ್ದಾರೆ.

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಕೈಗೊಳ್ಳುವ ನಿರ್ಧಾರಗಳಿಂದ, ಜಾಗತಿಗ ಪಿಡುಗಿನ ಪರಿಣಾಮಗಳು ಕ್ರಿಕೆಟ್‌ ಅನ್ನು ಪ್ರೀತಿಸುವ ದೇಶದ ಜನರ ಮೇಲೆ ನೇರವಾಗಿ ಆಗಲಿವೆ ಎಂದು ಒತ್ತಿ ಹೇಳಿದ್ದಾರೆ.

‘ಏಪ್ರಿಲ್‌ 15ರ ನಂತರ ಪರಿಸ್ಥಿತಿಯನ್ನು ಗಮನದಲ್ಲಿರಿಸಿ ಸರ್ಕಾರವು ಹೊಸ ಸಲಹೆ ಮತ್ತು ನಿರ್ದೇಶನಗಳನ್ನು ಹೊರಡಿಸಲಿದೆ. ಕ್ರಿಕೆಟ್‌ ಒಲಿಂಪಿಕ್‌ ಕ್ರೀಡೆಯಂತಲ್ಲ. ಕ್ರಿಡಾ ಚಟುವಟಿಕೆಗಳನ್ನು ನಡೆಸುವುದು ದೊಡ್ಡ ವಿಚಾರವಲ್ಲ. ಆದರೆ, ನಾಗರಿಕರ ಸುರಕ್ಷತೆ ಪ್ರಶ್ನೆಯಾಗಿ ಉಳಿದಿದೆ. ಒಂದೊಂದು ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಹಾಗಾಗಿ ಇದು ಕೇವಲ ಕ್ರೀಡಾ ಮಂಡಳಿ ಅಥವಾ ಆಟಗಾರರ ವಿಚಾರ ಮಾತ್ರವಲ್ಲ. ದೇಶದ ಎಲ್ಲರಿಗೂ ಸೇರಿದ್ದಾಗಿದೆ’ ಎಂದಿದ್ದಾರೆ.

ದೆಹಲಿ ಸರ್ಕಾರವು ಐಪಿಎಲ್‌ ಪಂದ್ಯಗಳನ್ನು ನಡೆಯಲು ಅವಕಾಶ ನೀಡುವುದಿಲ್ಲ ಎಂದು ಈ ಹಿಂದೆ ಹೇಳಿತ್ತು. ಅದಾದ ಬಳಿಕ ಎಚ್ಚೆತ್ತ ಬಿಸಿಸಿಐ, ಟೂರ್ನಿಯನ್ನು ಏಪ್ರಿಲ್‌ 15ರ ವರೆಗೆ ಮುಂದೂಡಿತ್ತು. ಇದೇ ತಿಂಗಳು 29ರಿಂದ ಟೂರ್ನಿ ಆರಂಭವಾಗಬೇಕಿತ್ತು.

ಮಾರ್ಚ್‌ 12ರಂದು ಸಭೆ ನಡೆಸಿದ್ದ ಕ್ರೀಡಾ ಇಲಾಖೆ, ದೇಶದಲ್ಲಿ ಎಲ್ಲ ರೀತಿಯ ಕ್ರೀಡಾ ಚಟುವಟಿಕೆಗಳನ್ನು ರದ್ದು ಮಾಡುವಂತೆ ಕ್ರೀಡಾ ಮಂಡಳಿಗಳಿಗೆ ಸೂಚಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು