ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SL vs BAN Test: ಮುಂದುವರಿದ ಶ್ರಿಲಂಕಾ ಪ್ರಾಬಲ್ಯ, ಮೆಂಡಿಸ್‌ಗೆ ತಪ್ಪಿದ 3ನೇ ಶತಕ

Published 31 ಮಾರ್ಚ್ 2024, 14:12 IST
Last Updated 31 ಮಾರ್ಚ್ 2024, 14:12 IST
ಅಕ್ಷರ ಗಾತ್ರ

ಚಿತ್ತಗಾಂಗ್: ಶ್ರೀಲಂಕಾ ಎರಡನೇ ಹಾಗೂ ಅಂತಿಮ ಕ್ರಿಕೆಟ್‌ ಟೆಸ್ಟ್ ಪಂದ್ಯದ ಎರಡನೇ ದಿನವೂ ಪ್ರಾಬಲ್ಯ ಸಾಧಿಸಿ ಮೊದಲ ಇನಿಂಗ್ಸ್‌ನಲ್ಲಿ 531 ರನ್‌ಗಳ ಭಾರಿ ಮೊತ್ತ ಗಳಿಸಿತು. ಆದರೆ ಕಮಿಂದು ಮೆಂಡಿಸ್‌ ಸತತ ಮೂರು ಇನಿಂಗ್ಸ್‌ನಲ್ಲಿ ಹ್ಯಾಟ್ರಿಕ್ ಶತಕದ ಅವಕಾಶವನ್ನು ಭಾನುವಾರ ಕೇವಲ ಎಂಟು ರನ್‌ಗಳಿಂದ ಕಳೆದುಕೊಂಡರು.

ಆದರೆ ಇಷ್ಟ ದೊಡ್ಡ ಮೊತ್ತದಲ್ಲಿ ಯಾವುದೇ ಬ್ಯಾಟರ್‌ ಶತಕ ಇರಲಿಲ್ಲ. ಆ ಮಟ್ಟಿಗೆ ಭಾರತದ ದಾಖಲೆ (9 ವಿಕೆಟ್‌ಗೆ 524) ಯನ್ನು ಲಂಕಾ ಸುಧಾರಿಸಿತು! 1976ರಲ್ಲಿ ನ್ಯೂಜಿಲೆಂಡ್ ವಿರುದ್ಧ ಕಾನ್ಪುರದಲ್ಲಿ ಭಾರತ ಗಳಿಸಿದ್ದ ಈ ಮೊತ್ತದಲ್ಲಿ ಒಂದೂ ಶತಕ ಇರಲಿಲ್ಲ.

ಬಾಂಗ್ಲಾದೇಶ ಎರಡನೇ ದಿನದಾಟ ಮುಗಿದಾಗ 1 ವಿಕೆಟ್‌ಗೆ 55 ರನ್ ಗಳಿಸಿತ್ತು. ಇನ್ನೂ 476 ರನ್ ಹಿಂದಿದೆ.

ಇದಕ್ಕೆ ಮೊದಲು ಶ್ರೀಲಂಕಾ ಇನಿಂಗ್ಸ್‌ನಲ್ಲಿ (ಶನಿವಾರ: 4 ವಿಕೆಟ್‌ಗೆ 314) ಅಸಿತ್‌ ಫೆರ್ನಾಂಡೊ ಕೊನೆಯವರಾಗಿ ನಿರ್ಗಮಿಸಿದಾಗ, ಇನ್ನೊಂದು ತುದಿಯಲ್ಲಿ ಕಮಿಂದು ಮೆಂಡಿಸ್ ಅಜೇಯ 92 ರನ್ ಗಳಿಸಿದ್ದರು. ಅವರು ಮೊದಲ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 102 ಮತ್ತು 164 ರನ್ ಹೊಡೆದಿದ್ದರು.

ಮೆಂಡಿಸ್‌ ಬಿಟ್ಟರೆ, ಧನಂಜಯ ಡಿಸಿಲ್ವ (70), ದಿನೇಶ್ ಚಾಂದಿಮಲ್ (59), ಕುಸಲ್ ಮೆಂಡಿಸ್ (93) ದಿಮುತ್ ಕರುಣಾರತ್ನೆ (86) ಮತ್ತು ನಿಶನ್ ಮಧುಷ್ಕ (57) ಅವರೂ ಅರ್ಧ ಶತಕ ಗಳಿಸಿದ್ದರು. ಬಾಂಗ್ಲಾ ಕಡೆ ಮಾಜಿ ನಾಯಕ ಶಕೀಬ್ ಅಲ್ ಹಸನ್ 37 ಓವರುಗಳಲ್ಲಿ 110 ರನ್ನಿತ್ತು 3 ವಿಕೆಟ್ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT