ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಕಾ ನಾಯಕ; ಮ್ಯಾಥ್ಯೂಸ್‌ಗೆ ಕೊಕ್

ವಿಶ್ವಕಪ್‌ ಅರ್ಹತಾ ಟೂರ್ನಿಗೆ ಲಂಕಾ ತಂಡ ಪ್ರಕಟ
Published 9 ಜೂನ್ 2023, 16:21 IST
Last Updated 9 ಜೂನ್ 2023, 16:21 IST
ಅಕ್ಷರ ಗಾತ್ರ

ಕೊಲಂಬೊ (ಎಎಫ್‌ಪಿ): ಶ್ರೀಲಂಕಾ ತಂಡದ ಮಾಜಿ ನಾಯಕ ಏಂಜೆಲೊ ಮ್ಯಾಥ್ಯೂಸ್‌ ಜಿಂಬಾಬ್ವೆಯಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್‌ ಅರ್ಹತಾ ಟೂರ್ನಿಗೆ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಪ್ರಕಟಿಸಿರುವ 15 ಆಟಗಾರರ ತಂಡದಲ್ಲಿ ಸ್ಥಾನ ಗಿಟ್ಟಿಸಿಲ್ಲ. ದಸುನ್ ಶನಕಾ ನಾಯಕತ್ವ ವಹಿಸಲಿದ್ದಾರೆ.

ಕಳೆದ ವಾರ ಆಫ್ಗಾನಿಸ್ತಾನ ವಿರುದ್ಧದ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಮ್ಯಾಥ್ಯೂಸ್‌ 21 ಎಸೆತಗಳಲ್ಲಿ ಕೇವಲ 12 ರನ್‌ ಗಳಿಸಿದ್ದರು. ಆ ಪಂದ್ಯದಲ್ಲಿ ಲಂಕಾ ತಂಡವು 6 ವಿಕೆಟ್‌ಗಳಿಂದ ಪರಾಭವಗೊಂಡಿತ್ತು. ನಂತರ ಎರಡು ಪಂದ್ಯಗಳಲ್ಲಿ ಮ್ಯಾಥ್ಯೂಸ್‌ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಆ ಪಂದ್ಯದಲ್ಲಿ ಜಯಿಸಿತ್ತು.

ಅರ್ಹತಾ ಟೂರ್ನಿಯಲ್ಲಿ ಲಂಕಾ ತಂಡವು ಜೂನ್‌ 19ರಂದು ಬುಲವಾಯೊದಲ್ಲಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ತಂಡವನ್ನು ಎದುರಿಸಲಿದೆ. ನಂತರ ಒಮನ್‌, ಐರ್ಲೆಂಡ್‌ ಮತ್ತು ಸ್ಕಾಟ್ಲೆಂಡ್ ತಂಡದ ವಿರುದ್ಧ ಸೆಣಸಾಡಲಿದೆ.

ಶ್ರೀಲಂಕಾ ತಂಡ: ದಸುನ್ ಶನಕ (ನಾಯಕ), ಕುಶಾಲ ಮೆಂಡಿಸ್, ದಿಮುತ ಕರುಣರತ್ನೆ, ಪಥುಮ್‌ ನಿಸಾಂಕ, ಚರಿತ್ ಅಸಲಂಕ, ಧನಂಜಯ ಡಿಸಿಲ್ವಾ, ಸಾದೀರ ಸಮರವಿಕ್ರಮ, ವಣೀಂದು ಹಸರಂಗ, ಚಮಿಕ ಕರುಣರತ್ನೆ, ದುಷ್ಯಂತ ಚಾಮೀರ, ಕಸುನ್‌ ರಜಿತ, ಲಹಿರು ಕುಮಾರ, ಮಹೀಶ ತೀಕ್ಷಣ, ಮಥೀಷ ಪಥಿರಾಣ, ದುಶಾನ್‌ ಹೇಮಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT