ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಫ್ಗಾನಿಸ್ತಾನ ವಿರುದ್ಧದ ಏಕದಿನ ಪಂದ್ಯ: ಪಥುಮ್ ನಿಸಾಂಕ ಅಜೇಯ 210

Published 9 ಫೆಬ್ರುವರಿ 2024, 16:11 IST
Last Updated 9 ಫೆಬ್ರುವರಿ 2024, 16:11 IST
ಅಕ್ಷರ ಗಾತ್ರ

ಕ್ಯಾಂಡಿ (ಶ್ರೀಲಂಕಾ): ಆರಂಭ ಆಟಗಾರ ಪಥುಮ್ ನಿಸಾಂಕ ಅವರು ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯದಲ್ಲಿ ದ್ವಿತಶಕ ಬಾರಿಸಿದ ಶ್ರೀಲಂಕಾದ ಮೊದಲ ಆಟಗಾರ ಎನಿಸಿದರು. ಅವರ ಅಜೇಯ 210 ರನ್‌ಗಳ ನೆರವಿನಿಂದ ಆತಿಥೇಯ ತಂಡ ಮೊದಲ ಏಕದಿನ ಪಂದ್ಯದಲ್ಲಿ ಶುಕ್ರವಾರ ಅಫ್ಗಾನಿಸ್ತಾನ ವಿರುದ್ಧ 3 ವಿಕೆಟ್‌ಗೆ 381 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ಮಾಜಿ ಆಟಗಾರ ಸನತ್‌ ಜಯಸೂರ್ಯ 24 ವರ್ಷಗಳ ಹಿಂದೆ (2000ನೇ ಇಸವಿ) ಭಾರತ ವಿರುದ್ಧ ಬಾರಿಸಿದ್ದ 189 ರನ್‌ಗಳು ದೀರ್ಘಕಾಲದಿಂದ ಶ್ರೀಲಂಕಾ ಆಟಗಾರನೊಬ್ಬನ ಅತ್ಯಧಿಕ ವೈಯಕ್ತಿಕ ಮೊತ್ತ ಎನಿಸಿತ್ತು. ನಿಸಾಂಕ ಗಳಿಸಿದ ಮೊತ್ತ ಏಕದಿನ ಕ್ರಿಕೆಟ್‌ನಲ್ಲಿ ಜಂಟಿ ಐದನೇ ಗರಿಷ್ಠ ಮೊತ್ತವಾಗಿದೆ.

ಈ ಕ್ರೀಡಾಂಗಣದಲ್ಲಿ ತಂಡವೊಂದು ಗಳಿಸಿದ ಅತ್ಯಧಿಕ ಮೊತ್ತ ಇದು. ಶ್ರೀಲಂಕಾದ ನಾಲ್ಕನೇ ಗರಿಷ್ಠ ಮೊತ್ತ. 25 ವರ್ಷದ ನಿಸಾಂಕ ಅವರು 139 ಎಸೆತಗಳ 20 ಬೌಂಡರಿ, ಎಂಟು ಸಿಕ್ಸರ್‌ಗಳನ್ನು ಹೊಡೆದರು. 27ನೇ ಓವರ್‌ನಲ್ಲಿ ಅವಿಷ್ಕಾ ಫೆರ್ನಾಂಡೊ (88) ಅವರು ನಿರ್ಗಮಿಸುವ ಮೊದಲ ಮೊದಲ ವಿಕೆಟ್‌ ಜೊತೆಯಾಟದಲ್ಲಿ 182 ರನ್‌ಗಳು ಬಂದಿದ್ದವು. ನಾಯಕ ಕುಸಲ್ ಮೆಂಡಿಸ್‌ ವಿಫಲರಾದರು.

ಅಫ್ಗಾನಿಸ್ತಾನ 30 ಓವರುಗಳ ಆಟದ ನಂತರ 5 ವಿಕೆಟ್‌ಗೆ 165 ರನ್ ಗಳಿಸಿತ್ತು. ಅಜ್ಮತ್‌ಉಲ್ಲ ಒಮರ್‌ಝೈ 51 ರನ್ ಮತ್ತು ಮೊಹಮ್ಮದ್ ನಬಿ 76 ರನ್ ಗಳಿಸಿ ಅಜೇಯರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT