ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ವಿಶ್ವಕಪ್ ಯೋಜನೆ ಅವಾಸ್ತವಿಕ: ಕ್ರಿಕೆಟ್ ಆಸ್ಟ್ರೇಲಿಯಾ

Last Updated 16 ಜೂನ್ 2020, 6:06 IST
ಅಕ್ಷರ ಗಾತ್ರ

ಸಿಡ್ನಿ: ವಿಶ್ವದಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಸರಣ ತೀವ್ರವಾಗಿದೆ. ಈ ನಡುವೆಯೇ ಇದೇ ವರ್ಷ ಟಿ20 ಕ್ರಿಕೆಟ್ ವಿಶ್ವಕಪ್ ಆಯೋಜಿಸುವುದು ಅವಾಸ್ತವಿಕ ಯೋಜನೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾದ ಮುಖ್ಯಸ್ಥ ಇಯರ್ಲ್ ಎಡ್ಡಿಂಗ್ಸ್‌ ಒಪ್ಪಿಕೊಂಡಿದ್ದಾರೆ.

ಅಕ್ಟೋಬರ್ 18ರಿಂದ ನವೆಂಬರ್‌ 15ರವರೆಗೆ ಟೂರ್ನಿಯನ್ನು ಆಯೋಜಿಸಲು ಈ ಮೊದಲು ವೇಳಾಪಟ್ಟಿಯನ್ನು ರೂಪಿಸಲಾಗಿದೆ. ಆದರೆ ಕೊರೊನಾ ವೈರಸ್‌ ಕಾರಣದಿಂದ ಬಹಳಷ್ಟು ದೇಶಗಳಲ್ಲಿ ಲಾಕ್‌ಡೌನ್ ವಿಧಿಸಲಾಗಿದೆ. ಅಂತರರಾಷ್ಟ್ರೀಯ ಗಡಿಗಳನ್ನು ಮುಚ್ಚಲಾಗಿದೆ. ಈ ಸಂದರ್ಭದಲ್ಲಿ ವಿಮಾನ ಪ್ರಯಾಣವು ಪೂರ್ಣಪ್ರಮಾಣದಲ್ಲಿ ಮುಕ್ತವಾಗಿಲ್ಲ. ಪ್ರಯಾಣ ನಿರ್ಬಂಧಗಳಿವೆ.

’ಇದುವರೆಗೂ ಟೂರ್ನಿಯನ್ನು ಮುಂದೂಡಲಾಗಿಲ್ಲ ಅಥವಾ ರದ್ದು ಮಾಡಿಲ್ಲ. ಏಕೆಂದರೆ ಟೂರ್ನಿಯಲ್ಲಿ ಭಾಗವಹಿಸುವ 16 ತಂಡಗಳನ್ನು ಇಲ್ಲಿಗೆ ಕರೆಸಿ ಹೊಸ ನಿಯಮಗಳ ಪಾಲನೆಯೊಂದಿಗೆ ಸುರಕ್ಷಿತವಾಗಿ ಟೂರ್ನಿಯನ್ನು ಆಯೋಜಿಸುವ ಬಗ್ಗೆ ಎಲ್ಲ ಆಯಾಮಗಳಿಂದಲೂ ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ಹಲವು ದೇಶಗಳಲ್ಲಿ ಇನ್ನೂ ವೈರಸ್‌ ಸೋಂಕಿನ ಏರಿಕೆಯನ್ನು ನೋಡಿದರೆ ಯಾವುದೂ ಸುಲಭಸಾಧ್ಯವಲ್ಲವೆನಿಸುತ್ತಿದೆ‘ ಎಂದು ಎಡ್ಡಿಂಗ್ಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

’ಟೂರ್ನಿ ಆಯೋಜನೆ ವಹಿಸಿಕೊಂಡಿರುವ ಸ್ಥಳೀಯ ಸಮಿತಿಯು ಬಹಳ ಚೆನ್ನಾಗಿ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಯಾವುದೇ ನಿರ್ಧಾರ ಪ್ರಕಟವಾದರೂ ಅದಕ್ಕೆ ತಕ್ಕಂತೆ ಸಿದ್ಧತೆಗಳನ್ನು ಮಾಡಲು ಎಲ್ಲ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿದೆ‘ ಎಂದು ಹೇಳಿದರು.

ಟೂರ್ನಿಯ ಆಯೋಜನೆಯ ಕುರಿತು ನಿರ್ಧರಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಈಚೆಗೆ ಎರಡು ಬಾರಿ ಸಭೆ ಸೇರಿತ್ತು. ಆದರೆ ತೀರ್ಮಾನ ಕೈಗೊಂಡಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಅನಿಶ್ಚಿತತೆ ಇದೆ. ಜುಲೈ 8ರಿಂದ ಇಂಗ್ಲೆಂಡ್‌ನಲ್ಲಿ ನಡೆಯುವ ಟೆಸ್ಟ್ ಸರಣಿಗೆ ವೆಸ್ಟ್ ಇಂಡೀಸ್ ತಂಡವು ಬಹುತೇಕ ಒಂದು ತಿಂಗಳು ಮೊದಲೇ ಬಂದು ಬೀಡುಬಿಟ್ಟಿದೆ. ಆ ಟೂರ್ನಿಯ ಯಶಸ್ಸಿನ ಆಧಾರದಲ್ಲಿ ಉಳಿದ ಕ್ರಿಕೆಟ್‌ ಚಟುವಟಿಕೆಗಳ ಭವಿಷ್ಯ ಅಡಗಿದೆ.

ಆಸ್ಟ್ರೇಲಿಯಾದ ಕ್ರೀಡಾಂಗಣಗಳಲ್ಲಿ ಅಲ್ಲಿಯ ಪ್ರೇಕ್ಷಕರ ಸಾಮರ್ಥ್ಯದ ಶೇ 10ರಷ್ಟು ಜನರಿಗೆ ಪ್ರವೇಶ ನೀಡಲಾಗುವುದು ಎಂದು ಅಲ್ಲಿಯ ಪ್ರಧಾನಿ ಈಚೆಗೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT