ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC Rankings: ಕೇನ್ ಹಿಂದಿಕ್ಕಿದ ಸ್ಮಿತ್ ನಂ.1; ಕೊಹ್ಲಿ ನೆಗೆತ

Last Updated 16 ಜೂನ್ 2021, 15:12 IST
ಅಕ್ಷರ ಗಾತ್ರ

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ತಾಜಾ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಹಿಂದಿಕ್ಕಿರುವ ಆಸ್ಟ್ರೇಲಿಯಾ ಆಟಗಾರ ಸ್ಟೀವ್ ಸ್ಮಿತ್ ನಂ.1 ಸ್ಥಾನ ಆಲಂಕರಿಸಿದ್ದಾರೆ.

ಅದೇ ಹೊತ್ತಿಗೆ ಇಂಗ್ಲೆಂಡ್ ನಾಯಕ ಜೋ ರೂಟ್ ಹಿಂದಿಕ್ಕಿರುವ ಟೀಮ್ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಕೊಹ್ಲಿ ಬಳಿಯೀಗ 814 ರೇಟಿಂಗ್ ಅಂಕಗಳಿವೆ.

ಐಸಿಸಿ ಬುಧವಾರ ಬಿಡುಗಡೆ ಮಾಡಿರುವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಸ್ಮಿತ್ ಮಗದೊಮ್ಮೆ ಅಗ್ರಸ್ಥಾನಕ್ಕೇರಿದ್ದಾರೆ.

ಅಗ್ರ 10ರ ಕ್ರಮಾಂಕದ ಪೈಕಿ ರಿಷಭ್ ಪಂತ್ ಹಾಗೂ ರೋಹಿತ್ ಶರ್ಮಾ ಜಂಟಿಯಾಗಿ ಆರನೇ ಕ್ರಮಾಂಕವನ್ನು ಹಂಚಿಕೊಂಡಿದ್ದಾರೆ. ಇವರಿಬ್ಬರು 747 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ.

ಕೇನ್ ವಿಲಿಯಮ್ಸನ್ ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗಾಯದಿಂದಾಗಿ ಆಡಿರಲಿಲ್ಲ. ಇದರಿಂದಾಗಿ ಐದು ರೇಟಿಂಗ್ ಅಂಕಗಳ ನಷ್ಟವಾಗಿದೆ. ಅಗ್ರ ಸ್ಥಾನದಲ್ಲಿರುವ ಸ್ಮಿತ್ 891 ಹಾಗೂ ವಿಲಿಯಮ್ಸನ್ 886 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ.

ಮೂರನೇ ಸ್ಥಾನ ಕಾಯ್ದುಕೊಂಡಿರುವ ಆಸ್ಟ್ರೇಲಿಯಾದವರೇ ಆದ ಮಾರ್ನಸ್ ಲಾಬುಶೇನ್ 878 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಕಮಿನ್ಸ್ ಅಗ್ರ, ಅಶ್ವಿನ್ ನಂ.2
ಬೌಲಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ (908) ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (850) ದ್ವಿತೀಯ ಸ್ಥಾನದಲ್ಲಿದ್ದಾರೆ. ಅಶ್ವಿನ್ ಅಗ್ರ 10ರ ಬೌಲಿಂಗ್ ಪಟ್ಟಿಯಲ್ಲಿರುವ ಏಕಮಾತ್ರ ಭಾರತೀಯ ಬೌಲರ್ ಆಗಿದ್ದಾರೆ.

ಐಸಿಸಿ ಟೆಸ್ಟ್ ಟಾಪ್ 10 ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿ ಇಂತಿದೆ:
1. ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ): 891
2. ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್): 886
3. ಮಾರ್ನಸ್ ಲಾಬುಶೇನ್ (ಆಸ್ಟ್ರೇಲಿಯಾ): 878
4. ವಿರಾಟ್ ಕೊಹ್ಲಿ (ಭಾರತ): 814
5. ಜೋ ರೂಟ್ (ಇಂಗ್ಲೆಂಡ್): 797
6. ರಿಷಬ್ ಪಂತ್ (ಭಾರತ): 747
6. ರೋಹಿತ್ ಶರ್ಮಾ (ಭಾರತ): 747
8. ಹೆನ್ರಿ ನಿಕೋಲಸ್ (ನ್ಯೂಜಿಲೆಂಡ್): 732
9. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ): 724
10. ಬಾಬರ್ ಆಜಂ (ಪಾಕಿಸ್ತಾನ): 714

ಐಸಿಸಿ ಟೆಸ್ಟ್ ಟಾಪ್ 10 ಬೌಲಿಂಗ್ ರ‍್ಯಾಂಕಿಂಗ್ ಪಟ್ಟಿ ಇಂತಿದೆ:
1. ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ): 908
2. ರವಿಚಂದ್ರನ್ ಅಶ್ವಿನ್ (ಭಾರತ): 850
3. ಟಿಮ್ ಸೌಥಿ (ನ್ಯೂಜಿಲೆಂಡ್): 830
4. ಜೋಶ್ ಹೇಜಲ್‌ವುಡ್ (ಆಸ್ಟ್ರೇಲಿಯಾ): 816
5. ನೀಲ್ ವ್ಯಾಗ್ನರ್ (ನ್ಯೂಜಿಲೆಂಡ್): 815
6. ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್): 793
7. ಕಗಿಸೋ ರಬಡ (ದ. ಆಫ್ರಿಕಾ): 783
7. ಜೇಮ್ಸ್ ಆ್ಯಂಡರ್ಸನ್(ಇಂಗ್ಲೆಂಡ್): 783
9. ಜೇಸನ್ ಹೋಲ್ಡರ್ (ವೆಸ್ಟ್‌ಇಂಡೀಸ್): 754
10. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ): 744

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT