ಸನ್ರೈಸರ್ಸ್ ಸೇರಿದ ಬಳಿಕ ಕ್ರೀಡಾ ಬದುಕಿಗೆ ತಿರುವು ಸಿಕ್ಕಿತು: ಭುವಿ

ನವದೆಹಲಿ: ‘ಸನ್ರೈಸರ್ಸ್ ಹೈದರಾಬಾದ್ ತಂಡ ಸೇರಿದ ಬಳಿಕ ನನ್ನ ಕ್ರಿಕೆಟ್ ಬದುಕಿಗೆ ಹೊಸ ತಿರುವು ಲಭಿಸಿತು. ಡೆತ್ ಓವರ್ಗಳಲ್ಲಿ ಒತ್ತಡ ಮೀರಿ ನಿಂತು ಬೌಲಿಂಗ್ ಮಾಡುವುದನ್ನು ಕಲಿಯಲು ಸಹಕಾರಿಯಾಯಿತು’ ಎಂದು ಭಾರತ ಕ್ರಿಕೆಟ್ ತಂಡದ ಅನುಭವಿ ಮಧ್ಯಮ ವೇಗದ ಬೌಲರ್ ಭುವನೇಶ್ವರ್ ಕುಮಾರ್ ತಿಳಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ಆಡುವ ಸನ್ರೈಸರ್ಸ್ ತಂಡವು 2014ರಲ್ಲಿ ನಡೆದಿದ್ದ ಆಟಗಾರರ ಹರಾಜಿನಲ್ಲಿ ಭುವನೇಶ್ವರ್ ಅವರನ್ನು ಸೆಳೆದುಕೊಂಡಿತ್ತು.
ದೀಪ್ ದಾಸ್ ಗುಪ್ತಾ ನಡೆಸಿಕೊಡುವ ‘ಕ್ರಿಕೆಟ್ ಬಾಜಿ’ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿರುವ ಭುವನೇಶ್ವರ್ ‘ಯಾರ್ಕರ್ ಎಸೆತಗಳನ್ನು ಹಾಕುವ ಸಾಮರ್ಥ್ಯ ನನ್ನಲ್ಲಿತ್ತು. ಕ್ರಮೇಣ ಅದನ್ನು ಕಳೆದುಕೊಂಡೆ. ಸನ್ರೈಸರ್ಸ್ ಸೇರಿದ ಬಳಿಕ ಹೊಸ ಚೆಂಡಿನೊಂದಿಗೆ ದಾಳಿ ನಡೆಸುವ ಹಾಗೂ ಡೆತ್ ಓವರ್ಗಳಲ್ಲಿ ಬೌಲ್ ಮಾಡುವ ಜವಾಬ್ದಾರಿ ನನ್ನ ಹೆಗಲೇರಿತು. ಈ ಹೊಣೆಗಳನ್ನು ಯಶಸ್ವಿಯಾಗಿ ನಿಭಾಯಿಸುವ ಕಲೆಯೂ ಕರಗತವಾಯಿತು’ ಎಂದಿದ್ದಾರೆ.
‘ಮನೆಯಲ್ಲೇ ವ್ಯಾಯಾಮ ಮಾಡಲು ಅಗತ್ಯ ಸಲಕರಣೆಗಳು ಇರಲಿಲ್ಲ. ಕೊರೊನಾ ಬಿಕ್ಕಟ್ಟು ಬೇಗನೆ ಬಗೆಹರಿಯಬಹುದು ಎಂದು ಭಾವಿಸಿದ್ದೆ. ಹೀಗಾಗಿ ಲಾಕ್ಡೌನ್ ಜಾರಿಯಾದ ಆರಂಭದ 15 ದಿನಗಳನ್ನು ಆರಾಮವಾಗಿ ಕಳೆದೆ. ಲಾಕ್ಡೌನ್ ಮುಂದುವರಿಯುವ ಸೂಚನೆ ಸಿಕ್ಕಿದ ಕೂಡಲೇ ಸಲಕರಣೆಗಳನ್ನು ತರಿಸಿಕೊಂಡೆ. ಹೀಗಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಯಿತು’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.