ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: ಮುಂಬೈಗೆ ಹಿನ್ನಡೆ; ಮೊದಲ ಪಂದ್ಯದಲ್ಲಿ ಸೂರ್ಯ ಆಡುವುದು ಅನುಮಾನ

Published 19 ಮಾರ್ಚ್ 2024, 14:18 IST
Last Updated 19 ಮಾರ್ಚ್ 2024, 14:18 IST
ಅಕ್ಷರ ಗಾತ್ರ

ಮುಂಬೈ: ವಿಶ್ವದ ಅಗ್ರಮಾನ್ಯ ಟಿ20 ಬ್ಯಾಟರ್‌ ಸೂರ್ಯಕುಮಾರ್ ಯಾದವ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೊದಲ ಪಂದ್ಯ ಕಳೆದುಕೊಳ್ಳಲಿದ್ದಾರೆ. ಎನ್‌ಸಿಎನಿಂದ (ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿ) ಅವರಿಗೆ ಇನ್ನೂ ಫಿಟ್ನೆಸ್ ಪ್ರಮಾಣಪತ್ರ ಲಭಿಸಿಲ್ಲ.

ಮುಂಬೈ ಮಾರ್ಚ್‌ 24ರಂದು ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಕಳೆದ ಬಾರಿಯ ಫೈನಲಿಸ್ಟ್‌ ಗುಜರಾತ್ ಟೈಟನ್ಸ್ ವಿರುದ್ಧ ಆಡಲಿದೆ.

33 ವರ್ಷದ ಸೂರ್ಯ, ‘ಸ್ಪೋರ್ಟ್ಸ್‌ ಅರ್ನಿಯಾ’ ಶಸ್ತ್ರಚಿಕಿತ್ಸೆಗೊಳಗಾದ ನಂತರ ಬೆಂಗಳೂರಿನ ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ದಾರೆ. ಡಿಸೆಂಬರ್‌ನಿಂದ ಅವರು ಯಾವುದೇ ಅಂತರರಾಷ್ಟ್ರೀಯ ಪಂದ್ಯ ಆಡಿಲ್ಲ. ಅವರು ಮಂಗಳವಾರ ಫಿಟ್ನೆಸ್‌ ಟೆಸ್ಟ್‌ಗೆ ಒಳಗಾಗಿದ್ದರು.

ಅವರು ಇನ್ಸ್ಟಾದಲ್ಲಿ ‘ಹಾರ್ಟ್‌ಬ್ರೇಕ್‌’ ಎಂಬ ಸೂಚ್ಯವಾಗಿ ಸಂದೇಶ ಹಾಕಿದ್ದಾರೆ.

ಮುಂಬೈ ಇಂಡಿಯನ್ಸ್‌ನ ನಂತರದ ಮೂರು ಪಂದ್ಯಗಳಿಗೆ (27ರಂದು ಸನ್‌ರೈಸರ್ಸ್‌ ವಿರುದ್ಧ, ಏ. 1ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ, ಏ. 7ರಂದು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ) ಅವರ ಲಭ್ಯತೆ ನಂತರ ಗೊತ್ತಾಗಲಿದೆ.

***

3 ಪಂದ್ಯಗಳಿಗೆ ಹಸರಂಗ ಇಲ್ಲ

ಕೊಲಂಬೊ: ಆಲ್‌ರೌಂಡರ್ ವನಿಂದು ಹಸರಂಗ ಅವರು ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮೊದಲ ಮೂರು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧ ಮಾರ್ಚ್‌ 22ರಂದು ಆರಂಭವಾಗುವ ಎರಡು ಟೆಸ್ಟ್‌ಗಳ ಸರಣಿಗೆ ಅವರನ್ನು ಶ್ರೀಲಂಕಾ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಸೀಮಿತ ಓವರುಗಳ ಪಂದ್ಯದಲ್ಲಿ ಹೆಚ್ಚು ಗಮನ ಹರಿಸಲು ಅವರು ಕಳೆದ ಆಗಸ್ಟ್‌ನಲ್ಲಿ ಟೆಸ್ಟ್‌ ಮಾದರಿಗೆ ವಿದಾಯ ಹೇಳಿದ್ದರು. ಆದರೆ 26 ವರ್ಷದ ಲೆಗ್‌ ಬ್ರೇಕ್‌ ಬೌಲರ್‌ ಮಂಗಳವಾರ ಪ್ರಕಟಿಸಿದ ಟೆಸ್ಟ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಹಸರಂಗ ಅವರನ್ನು ₹1.5 ಕೋಟಿ ಮೊತ್ತಕ್ಕೆ ಸನ್‌ರೈಸರ್ಸ್ ತಂಡ ಪಡೆದಿತ್ತು. ಹೈದರಾಬಾದಿನ ತಂಡ ಮಾ.23ರಂದು ಮೊದಲ ಪಂದ್ಯವನ್ನು ಕೋಲ್ಕತ್ತ ನೈಟ್‌ ರೈಡರ್ಸ್ ವಿರುದ್ಧ ಆಡಲಿದೆ.

****

ಮುಂಬೈ ತಂಡಕ್ಕೆ ಲ್ಯೂಕ್ ವುಡ್

ನವದೆಹಲಿ: ಕಾಲಿನ ಮೂಳೆ ಮುರಿತದಿಂದಾಗಿ ಆಸ್ಟ್ರೇಲಿಯಾದ ಎಡಗೈ ವೇಗಿ ಜೇಸನ್ ಬೆಹ್ರೆನ್‌ಡಾರ್ಫ್ ಅವರು ತಮಗೆ ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ತರಬೇತಿ ವೇಳೆ ಆಕಸ್ಮಿಕವಾಗಿ ಅವರಿಗೆ ಮೂಳೆಮುರಿತವಾಗಿದೆ.

33 ವರ್ಷದ ಜೇಸನ್ ಬದಲು ಇಂಗ್ಲೆಂಡ್‌ನ ಎಡಗೈ ವೇಗಿ ಲ್ಯೂಕ್ ವುಡ್‌ ಅವರು ಮುಂಬೈ ತಂಡ ಸೇರಿಕೊಳ್ಳಲಿದ್ದಾರೆ. ಕಳೆದ ವರ್ಷ 12 ಪಂದ್ಯಗಳಿಂದ 14 ವಿಕೆಟ್‌ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT