ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ತಂಡಕ್ಕೆ ತ್ರಿಪಾಠಿ ನಾಯಕ, ಕೇದಾರ್‌ಗೆ ಅವಕಾಶ

ಸೈಯದ್ ಮುಷ್ತಾಕ್ ಅಲಿ ಟ್ರೋಫಿ
Last Updated 30 ಡಿಸೆಂಬರ್ 2020, 16:20 IST
ಅಕ್ಷರ ಗಾತ್ರ

ಪುಣೆ: ಮುಂದಿನ ತಿಂಗಳು ನಡೆಯಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಮಹಾರಾಷ್ಟ್ರ ತಂಡವನ್ನು ರಾಹುಲ್ ತ್ರಿಪಾಠಿ ಮುನ್ನಡೆಸುವರು.

ಭಾರತ ತಂಡದ ಆಲ್‌ರೌಂಡರ್ ಕೇದಾರ್ ಜಾಧವ್ ಮತ್ತು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮಿಂಚಿದ್ದ ಋತುರಾಜ್ ಗಾಯಕವಾಡ್ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯು ಬುಧವಾರ 20 ಆಟಗಾರರ ತಂಡವನ್ನು ಪ್ರಕಟಿಸಿದೆ.

ತಂಡವು ಎಲೀಟ್ ಸಿ ಗುಂಪಿನಲ್ಲಿ ಆಡಲಿದೆ. ಈ ಗುಂಪಿನಲ್ಲಿ ಗುಜರಾತ್, ಛತ್ತೀಸಗಡ, ಹಿಮಾಚಲಪ್ರದೇಶ, ಬರೋಡಾ ಮತ್ತು ಉತ್ತರಖಂಡ ತಂಡಗಳು ಇವೆ. ಜನವರಿ 10ರಿಂದ ಲೀಗ್ ಹಂತದ ಪಂದ್ಯಗಳು ವಡೋದರಾದಲ್ಲಿ ನಡೆಯಲಿವೆ.

ತಂಡ: ರಾಹುಲ್ ತ್ರಿಪಾಠಿ (ನಾಯಕ), ಋತುರಾಜ್ ಗಾಯಕವಾಡ್, ನೌಶಾದ್ ಶೇಖ್, ಕೇದಾರ್ ಜಾಧವ್, ರಂಜೀತ್ ನಿಕ್ಕಂ, ಅಜೀಮ್ ಖಾಜಿ, ನಿಖಿಲ್ ನಾಯಕ (ವಿಕೆಟ್‌ಕೀಪರ್), ವಿಶಾಂತ್ ಮೋರೆ (ನಾಯಕ), ಸತ್ಯಜೀತ್ ಬಚಾವ್, ತರಂಜೀತ್ ಸಿಂಗ್ ಧಿಲ್ಲೋನ್, ಶಂಶ್ಜಮಾ ಖಜಿ, ಪ್ರದೀಪ್ ದಾದೆ, ಮುಖೇಶ್ ಚೌಧರಿ, ಮನೋಜ್ ಇಂಗ್ಳೆ, ದಿವ್ಯಾಂಗ್ ಹಿಂಗಣಕರ್, ರಾಜ್ಯವರ್ಧನ್ ಹಂಗರಗೇಕರ್, ಜಗದೀಶ್ ಝೋಪ್, ಸ್ವಪ್ನಿಲ್ ಗುಗಾಳೆ, ಧನರಾಜ್ ಪರ್ದೇಶಿ, ಸನ್ನಿ ಪಂಡಿತ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT