ಗುರುವಾರ , ಮಾರ್ಚ್ 23, 2023
21 °C

T20 WC | ಅಫ್ಗನ್‌ ವಿರುದ್ಧ ಭಾರತ ಆಲ್‌ರೌಂಡ್ ಆಟವಾಡಿದೆ: ಸೆಹ್ವಾಗ್ ಮೆಚ್ಚುಗೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಟಿ–20 ವಿಶ್ವಕಪ್‌ ಟೂರ್ನಿಯಲ್ಲಿ ಬುಧವಾರ ನಡೆದ ಅಫ್ಗಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡೂ ವಿಭಾಗಳಲ್ಲೂ ಉತ್ತಮ ಪ್ರದರ್ಶನ ನೀಡುವ ಮೂಲಕ ಗೆಲುವು ಸಾಧಿಸಿದೆ ಎಂದು ಹಿರಿಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ ಸೂಪರ್ 12ರ ಎರಡನೇ ಗುಂಪಿನ ಈ ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ಆಲ್‌ರೌಂಡ್ ಆಟವಾಡಿದ ಭಾರತ 66 ರನ್‌ಗಳ ಜಯ ಸಾಧಿಸಿತು.

ಪಂದ್ಯದ ಕುರಿತು ಮಾತನಾಡಿದ ಸೆಹ್ವಾಗ್‌, ‘ಟೀಮ್ ಇಂಡಿಯಾದ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗದ ಸಕಾರಾತ್ಮಕ ಉದ್ದೇಶದಿಂದ ಅಫ್ಗನ್‌ ವಿರುದ್ಧ ಜಯ ಸಾಧ್ಯವಾಗಿದೆ. ಆಟಗಾರರು ಕ್ಯಾಚ್‌ಗಳನ್ನು ಕೈಚೆಲ್ಲದೆ ಉತ್ತಮ ರೀತಿಯಲ್ಲಿ ಫೀಲ್ಡಿಂಗ್‌ ಮಾಡಿದರು. ಇದರಿಂದ ಭಾರತಕ್ಕೆ ಗೆಲುವು ಸಾಧಿಸಲು ಸಾಧ್ಯವಾಯಿತು. ಮುಂದಿನ ಪಂದ್ಯಗಳಲ್ಲೂ ಭಾರತ ಇದೇ ರೀತಿಯ ಪ್ರದರ್ಶನ ತೋರಬೇಕು. ನಾವು ಎದುರಾಳಿ ತಂಡದ ವಿರುದ್ಧ ಧೈರ್ಯವಾಗಿ ಹೋರಾಟ ನಡೆಸಬೇಕೇ ಹೊರತು ಸುಲಭವಾಗಿ ಶರಣಾಗಬಾರದು’ ಎಂದು ಸಲಹೆ ನೀಡಿದ್ದಾರೆ.

ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ವಿರುದ್ಧ ಭಾರತ ಸೋಲು ಕಂಡಿತ್ತು. ಬಳಿಕ ಪುಟಿದೆದ್ದಿರುವ ಕೊಹ್ಲಿ ಪಡೆ ಅಫ್ಗನ್‌ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಮೂಲಕ ಗೆಲುವಿನ ಲಯಕ್ಕೆ ಮರಳಿದೆ.

ಭಾರತ ಮುಂದಿನ ಪಂದ್ಯದಲ್ಲಿ ನ.5ರಂದು ಸ್ಕಾಟ್ಲೆಂಡ್‌ ವಿರುದ್ಧ ಸೆಣಸಲಿದೆ.

ಇದನ್ನೂ ಓದಿ... T20 WC | IND vs AFG: ರೋಹಿತ್ -ರಾಹುಲ್ ಅಬ್ಬರ, ಬಸವಳಿದ ಅಫ್ಗನ್ ಬೌಲರ್‌ಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು