ನವದೆಹಲಿ: ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿ ಸಹಯೋಗದಲ್ಲಿ ಈ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಭಾರತದ 15 ಆಟಗಾರರ ತಂಡವನ್ನು ಏಪ್ರಿಲ್ ಕೊನೆಯ ವಾರದಲ್ಲಿ ಪ್ರಕಟಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ಮಂಡಳಿಯು ಆಯ್ಕೆಯಾದ ತಂಡದ ಪಟ್ಟಿಯನ್ನು ಮೇ 1ರೊಳಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಗೆ ಸಲ್ಲಿಸಬೇಕು. ಅದರ ನಂತರ ತಂಡದಲ್ಲಿ ಬದಲಾವಣೆ ಮಾಡಲು ಮೇ 25ರವರೆಗೆ ಕಾಲಾವಕಾಶ ಇದೆ.

‘ಐಪಿಎಲ್ ಟೂರ್ನಿಯ ಮೊದಲ ಹಂತವು ಮುಗಿದಾಗ ರಾಷ್ಟ್ರೀಯ ಆಯ್ಕೆ ಸಮಿತಿಗೆ ಉತ್ತಮ ಆಟಗಾರರನ್ನು ಆಯ್ಕೆ ಮಾಡುವ ಅವಕಾಶ ಸಿಗುತ್ತದೆ. ಆಟಗಾರರ ಫಿಟ್‌ನೆಸ್, ಸಾಮರ್ಥ್ಯ ಮತ್ತು ಅಂಕಿ ಸಂಖ್ಯೆಗಳನ್ನು ನೋಡಿ ಆಯ್ಕೆ ನಡೆಸುತ್ತಾರೆ. ಆದ್ದರಿಂದ ಏಪ್ರಿಲ್ ಕೊನೆಯ ವಾರದವರೆಗೂ ಅವಲೋಕನ ನಡೆಸಿದ ನಂತರ ತಂಡವನ್ನು ರಚಿಸಲಾಗುವುದು‘ ಎಂದು ಬಿಸಿಸಿಐ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಐಪಿಎಲ್ ಲೀಗ್ ಹಂತವು ಮೇ 19ರಂದು ಮುಗಿಯುತ್ತದೆ. ಆಗ ಪ್ಲೇ ಆಫ್ ಹಂತಕ್ಕೆ ಹೋಗದಿರುವ ತಂಡಗಳಲ್ಲಿರುವ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಆಟಗಾರರ ಬಳಗವನ್ನು ಮೊದಲ ಹಂತದಲ್ಲಿ ನ್ಯೂಯಾರ್ಕ್‌ಗೆ ಕಳಿಸಲಾಗುವುದು. ಅವರು ಅಲ್ಲಿ ಅಭ್ಯಾಸ ಆರಂಭಿಸುವರು’ ಎಂದು ಮೂಲಗಳು ತಿಳಿಸಿವೆ.

‘ಕೇಂದ್ರ ಗುತ್ತಿಗೆಯಲ್ಲಿರುವ ಅಥವಾ ತಂಡಕ್ಕೆ ಆಯ್ಕೆಯಾಗುವ ಸಂಭವನೀಯ ಆಟಗಾರರು ಒಂದೊಮ್ಮೆ ಗಾಯಗೊಂಡರೆ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಯ ಔಷಧ ಮತ್ತು ಕ್ರೀಡಾ ವಿಜ್ಞಾನ ವಿಭಾಗವು ಅವರನ್ನು ನೋಡಿಕೊಳ್ಳಲಿದೆ. ಎನ್‌ಸಿಎ ವೈದ್ಯಕೀಯ ತಂಡವು ನಿಗಾ ವಹಿಸುವುದು‘ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.