ಬುಧವಾರ, ಮಾರ್ಚ್ 29, 2023
27 °C

ದೇಶಕ್ಕಾಗಿ ವಿಶ್ವಕಪ್ ಗೆಲ್ಲಲು ಬಯಸುತ್ತೇನೆ: ಕೆ.ಎಲ್. ರಾಹುಲ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ದುಬೈ: ದೇಶಕ್ಕಾಗಿ ವಿಶ್ವಕಪ್ ಗೆಲ್ಲುವ ಗುರಿ ಹೊಂದಿದ್ದೇನೆ ಎಂದು ಭಾರತ ಕ್ರಿಕೆಟ್ ತಂಡದ ಬಲಗೈ ಆಟಗಾರ ಕೆ.ಎಲ್. ರಾಹುಲ್ ತಿಳಿಸಿದ್ದಾರೆ. 

ಐಸಿಸಿ ಬಿಡುಗಡೆ ಮಾಡಿರುವ ಇನ್‌ಸ್ಟಾಗ್ರಾಂ ವಿಡಿಯೊದಲ್ಲಿ ರಾಹುಲ್, ಈ ಕುರಿತು ಪ್ರತಿಕ್ರಿಯಿಸಿದ್ದಾರೆ. 

ಇದನ್ನೂ ಓದಿ: 

'2011ರ ವಿಶ್ವಕಪ್ ಗೆಲುವನ್ನು ನಾನು ಮನೆಯಲ್ಲಿ ವೀಕ್ಷಿಸಿದ್ದೆ. ಭಾರತ ವಿಶ್ವಕಪ್ ಗೆದ್ದಾಗ ನನ್ನ ಚಿಂತನೆಯು ಬದಲಾಯಿತು' ಎಂದು ಹೇಳಿದ್ದಾರೆ.  

'ಆ ದಿನದ ಬಳಿಕ ನಾನು ಕೂಡ ಅದನ್ನೇ ಸಾಧಿಸುವ ಛಲ ಹೊಂದಿದ್ದೇನೆ. ನಾನು ನನ್ನ ದೇಶಕ್ಕಾಗಿ ವಿಶ್ವಕಪ್ ಗೆಲ್ಲಲು ಬಯಸುತ್ತೇನೆ. ಒಂದು, ಎರಡು ಅಥವಾ ಮೂರು, ಸಾಧ್ಯವಾದಷ್ಟು ಗೆಲ್ಲಬೇಕು. ವಿಶ್ವಕಪ್‌ನ ಭಾಗವಾಗಿ ಇತಿಹಾಸವನ್ನು ರಚಿಸಬೇಕು' ಎಂದು ಹೇಳಿದ್ದಾರೆ. 

ಏತನ್ಮಧ್ಯೆ ಪ್ರಸಕ್ತ ಸಾಗುತ್ತಿರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಮೊದಲೆರಡು ಪಂದ್ಯಗಳಲ್ಲಿ ವೈಫಲ್ಯವನ್ನು ಅನುಭವಿಸಿರುವ ಕೆ.ಎಲ್. ರಾಹುಲ್, ಅಫ್ಗಾನಿಸ್ತಾನ ವಿರುದ್ಧ ಅರ್ಧಶತಕ ಗಳಿಸುವ ಮೂಲಕ ಕೊನೆಗೂ ಬ್ಯಾಟಿಂಗ್ ಲಯಕ್ಕೆ ಮರಳಿದ್ದಾರೆ. 

ಈಗ ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ವಿರುದ್ಧವೂ ಉತ್ತಮ ಆಟ ಮುಂದುವರಿಸುವ ಇರಾದೆಯಲ್ಲಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು