ನವದೆಹಲಿ: ‘ಭಾರತೀಯ ಅಭಿಮಾನಿಗಳಿಗೆ ಧನ್ಯವಾದ‘ ಎಂದು ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಣ ಸೆಮಿಫೈನಲ್ ಪಂದ್ಯದ ವೇಳೆ ಕಂಗೊಳಿಸಿದ್ದ ಪಾಕಿಸ್ತಾನದ ಅಭಿಮಾನಿ ‘ನಟಾಶಾ‘ ಹೇಳಿದ್ದಾರೆ.

ಬುಧವಾರ ನಡೆದ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ ಸೆಮಿಫೈನಲ್ ಪಂದ್ಯದಲ್ಲಿ, ವೀಕ್ಷಕರ ಗ್ಯಾಲರಿಯಲ್ಲಿದ್ದ ಇವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಹರಿದಾಡಿತ್ತು.

ಎದೆಗೆ ಪಾಕಿಸ್ತಾನದ ಬಾವುಟವನ್ನು ಅಂಟಿಸಿಕೊಂಡು, ಪಾಕಿಸ್ತಾನ ತಂಡಕ್ಕೆ ಚಿಯರ್ ಅಪ್ ಮಾಡುವ ಅವರ ಹಲವು ಫೋಟೋಗಳು ನೆಟ್ಟಿಗರ ಚರ್ಚೆಯ ವಸ್ತುವಾಗಿತ್ತು. ಅದರಲ್ಲೂ ಭಾರತೀಯರೇ ಹೆಚ್ಚಾಗಿ ಇವರ ಫೋಟೋವನ್ನು ಶೇರ್ ಮಾಡಿದ್ದರು.

‘ಕ್ಯಾಮೆರಾಮೆನ್ ಯಾವತ್ತೂ ನಮ್ಮನ್ನು ನಿರಾಸೆಗೊಳಿಸುವುದಿಲ್ಲ‘ ಎಂದು ಟ್ವಿಟ್ಟರ್ನಲ್ಲಿ ಬಳಕೆದಾರರೊಬ್ಬರು ನಟಶಾ ಅವರ ಫೋಟೋ ಹಂಚಿಕೊಂಡಿದ್ದರು. ವಿವಿಧ ಟ್ರೋಲ್ ಪೇಜ್ಗಳಿಗೂ ನಟಶಾ ಅವರು ವಸ್ತುವಾಗಿದ್ದರು.

ತಮ್ಮ ಪೋಟೋ ವೈರಲ್ ಮಾಡಿದ್ದಕ್ಕೆ ನಟಾಶಾ ಅವರು ಭಾರತೀಯ ಅಭಿಮಾನಿಗಳಿಗೆ ಧನ್ಯವಾದ ಸಮರ್ಪಿಸಿದ್ದಾರೆ. ‘ಭಾರತೀಯ ಅಭಿಮಾನಿಗಳಿಗೆ ಧನ್ಯವಾದಗಳು. ಭಾನುವಾರ ನಡೆಯಲಿರುವ ಫೈನಲ್ನಲ್ಲಿ ಭೇಟಿಯಾಗೋಣ‘ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.