ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟಿ20 ವಿಶ್ವಕಪ್‌ನಲ್ಲಿ ಹೆಚ್ಚು ರನ್, ಅಧಿಕ ವಿಕೆಟ್: ಅಫ್ಗಾನ್ ಆಟಗಾರರೇ ಟಾಪರ್ಸ್

Published 26 ಜೂನ್ 2024, 14:08 IST
Last Updated 26 ಜೂನ್ 2024, 14:08 IST
ಅಕ್ಷರ ಗಾತ್ರ

ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ ಆತಿಥ್ಯದಲ್ಲಿ ನಡೆಯುತ್ತಿರುವ ಈ ಬಾರಿಯ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯು ಸೆಮಿಫೈನಲ್‌ ಹಂತಕ್ಕೆ ತಲುಪಿದೆ.

ಭಾರತ, ಅಫ್ಗಾನಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳು ನಾಕೌಟ್‌ ಹಂತಕ್ಕೆ ಪ್ರವೇಶ ಪಡೆದಿವೆ. ಈ ಸುತ್ತಿನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಅಫ್ಗಾನಿಸ್ತಾನ, ಎರಡನೇ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಲಿವೆ.

ಗೆದ್ದ ತಂಡಗಳು ಭಾನುವಾರ (ಜೂನ್‌ 29) ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.

20 ತಂಡಗಳು ನಾಲ್ಕು ಗುಂಪುಗಳಾಗಿ ಸೆಣಸಾಟ ನಡೆಸಿದ ಟೂರ್ನಿಯ 'ಸೂಪರ್‌ 8' ಹಂತ ನಿನ್ನೆಯಷ್ಟೇ (ಜೂನ್‌ 25) ಮುಕ್ತಾಯವಾಗಿದೆ. ಇದುವರೆಗೆ ಅತಿಹೆಚ್ಚು ರನ್‌ ಗಳಿಸಿದ ಬ್ಯಾಟರ್‌ ಹಾಗೂ ಅಧಿಕ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಫ್ಗಾನಿಸ್ತಾನ ಆಟಗಾರರ ಮೇಲುಗೈ ಸಾಧಿಸಿದ್ದಾರೆ.

ಈ ತಂಡದ ಇಬ್ಬರು ಬ್ಯಾಟರ್‌ಗಳ ವಿಭಾಗದಲ್ಲಿ ಹಾಗೂ ಮೂವರು ಬೌಲರ್‌ಗಳ ಲಿಸ್ಟ್‌ನಲ್ಲಿ ಅಗ್ರ ಐದರಲ್ಲಿ ಕಾಣಿಸಿಕೊಂಡಿದ್ದಾರೆ.

ರೆಹಮಾನುಲ್ಲಾ ಗುರ್ಬಾಜ್ 7 ಪಂದ್ಯಗಳಲ್ಲಿ ಮೂರು ಅರ್ಧಶತಕ ಸಹಿತ 281 ರನ್‌ ಗಳಿಸಿದ್ದಾರೆ. ಹೆಚ್ಚು ರನ್‌ ಗಳಿಸಿಕೊಂಡ ಆಟಗಾರನಾಗಿಯೇ ಟೂರ್ನಿ ಮುಗಿಸುವ ಅವಕಾಶ ಅವರಿಗಿದೆ. ಸೆಮಿಫೈನಲ್‌ಗೆ 'ಟಿಕೆಟ್‌' ಗಿಟ್ಟಿಸಿರುವ ತಂಡಗಳ ಪೈಕಿ ದಕ್ಷಿಣ ಆಫ್ರಿಕಾದ ಕ್ವಿಂಟನ್‌ ಡಿ ಕಾಕ್ (199 ರನ್‌) ಹಾಗೂ ಭಾರತದ ರೋಹಿತ್‌ ಶರ್ಮಾ (191 ರನ್‌) ಅವರಿಗೆ ಗುರ್ಬಾಜ್‌ ಅವರನ್ನು ಹಿಂದಿಕ್ಕಲು ಅವಕಾಶವಿದೆ. ಆದರೆ ಅದಕ್ಕಾಗಿ ಅವರು 90ಕ್ಕಿಂತ ಹೆಚ್ಚು ರನ್‌ ಗಳಿಸುವ ಅಗತ್ಯವಿದೆ.

ಉಳಿದಂತೆ, ಅದೇ ತಂಡದ ಫಜಲ್‌ಹಕ್‌ ಫಾರೂಕಿ 16 ವಿಕೆಟ್‌ ಕಬಳಿಸಿ ಬೌಲರ್‌ಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರಿಗೆ ಭಾರತದ ಆರ್ಷದೀಪ್‌ ಸಿಂಗ್ (15 ವಿಕೆಟ್‌) ಪೈಪೋಟಿಯೊಡ್ಡುತ್ತಿದ್ದಾರೆ.

ಹೆಚ್ಚು ರನ್ ಗಳಿಸಿದ ಐವರು
1. ರೆಹಮಾನುಲ್ಲಾ ಗುರ್ಬಾಜ್ (ಅಫ್ಗಾನಿಸ್ತಾನ): 281 ರನ್‌
2. ಟ್ರಾವಿಸ್‌ ಹೆಡ್‌ (ಆಸ್ಟ್ರೇಲಿಯಾ): 255 ರನ್‌
3. ಇಬ್ರಾಹಿಂ ಜದ್ರಾನ್ (ಅಫ್ಗಾನಿಸ್ತಾನ): 229 ರನ್‌
4. ನಿಕೋಲಸ್ ಪೂರನ್ (ವೆಸ್ಟ್‌ ಇಂಡೀಸ್‌): 228 ರನ್‌
5. ಆ್ಯಂಡ್ರೋಸ್ ಗೌಸ್ (ಅಮೆರಿಕ): 219 ರನ್‌

ಹೆಚ್ಚು ವಿಕೆಟ್‌ ಪಡೆದ ಐವರು
1. ಫಜಲ್‌ಹಕ್‌ ಫಾರೂಕಿ (ಅಫ್ಗಾನಿಸ್ತಾನ): 16 ವಿಕೆಟ್‌
2. ಆರ್ಶದೀಪ್‌ ಸಿಂಗ್ (ಭಾರತ): 15 ವಿಕೆಟ್‌
3. ರಶೀದ್ ಖಾನ್ (ಅಫ್ಗಾನಿಸ್ತಾನ): 14 ವಿಕೆಟ್‌
4. ರಿಶದ್‌ ಹೊಸೈನ್‌ (ಬಾಂಗ್ಲಾದೇಶ): 14 ವಿಕೆಟ್‌
5. ನವೀನ್‌ ಉಲ್‌ ಹಕ್‌ (ಅಫ್ಗಾನಿಸ್ತಾನ): 13 ವಿಕೆಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT