ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 WC: ಸೆಮಿಫೈನಲ್ ಗೆಲುವಿನ ಬಳಿಕ ಭಾವುಕರಾದ ರೋಹಿತ್; ಕೊಹ್ಲಿ ಸಂತೈಸಿದ ರಾಹುಲ್

Published 28 ಜೂನ್ 2024, 10:58 IST
Last Updated 28 ಜೂನ್ 2024, 10:58 IST
ಅಕ್ಷರ ಗಾತ್ರ

ಗಯಾನ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿರುವ ಟೀಮ್ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟಿತು.

ಈ ಪಂದ್ಯ ಗೆಲುವಿನ ಬಳಿಕ ನಾಯಕ ರೋಹಿತ್ ಶರ್ಮಾ ಅವರು ಭಾವುಕರಾಗಿ ಕಂಡುಬಂದರು. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವ್ಯಾಪಕವಾಗಿ ಹರಿದಾಡುತ್ತಿದೆ. ಬಳಿಕ ರೋಹಿತ್ ಅವರನ್ನು ಕೊಹ್ಲಿ ಸಮಾಧಾನಪಡಿಸುತ್ತಿರುವುದು ದೃಶ್ಯ ಕಂಡುಬಂದಿದೆ.

2022ರ ಟ್ವೆಂಟಿ-20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಎದುರಾದ ಸೋಲಿಗೆ ಭಾರತ ಸೇಡುತೀರಿಸಿಕೊಂಡಿತು. ಅಂದು ಅಡಿಲೇಡ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಎದುರಾದ ಸೋಲಿನ ಬಳಿಕ ರೋಹಿತ್ ಕಣ್ಣೀರು ಸುರಿಸಿದ್ದರು. ಈಗ ಈ ಎರಡೂ ಚಿತ್ರಗಳನ್ನು ಅಭಿಮಾನಿಗಳು ಹಂಚಿಕೊಂಡಿದ್ದಾರೆ.

ಕೊಹ್ಲಿ ಅವರನ್ನು ಸಂತೈಸಿದ ರಾಹುಲ್...

ಟೂರ್ನಿಯಲ್ಲಿ ಸತತ ವೈಫಲ್ಯ ಕಂಡಿರುವ ವಿರಾಟ್ ಕೊಹ್ಲಿ, ಸಹ ಆಟಗಾರರ ಮಧ್ಯೆ ಬೇಸರದಲ್ಲಿರುವುದು ಕಂಡುಬಂದಿದೆ. ಈ ವೇಳೆ ಕೋಚ್ ರಾಹುಲ್ ದ್ರಾವಿಡ್ ಸಂತೈಸುತ್ತಿರುವ ಮಗದೊಂದು ವಿಡಿಯೊ ಸಹ ಹರಿದಾಡುತ್ತಿದೆ.

ಟೀಮ್ ಇಂಡಿಯಾ ಆಟಗಾರರು ಪರಸ್ಪರ ಉತ್ತಮ ಬಾಂಧವ್ಯ ಕಾಪಾಡಿಕೊಂಡಿದ್ದಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಒಬ್ಬರನ್ನೊಬ್ಬರನ್ನು ಬೆಂಬಲಿಸುತ್ತಿರುವುದು ತಂಡದಲ್ಲಿರುವ ಉತ್ತಮ ವಾತಾವರಣಕ್ಕೆ ಸಾಕ್ಷಿಯಾಗಿದೆ.

ಮ್ಯಾಚ್ ಹೈಲೈಟ್ಸ್ ಇಲ್ಲಿ ವೀಕ್ಷಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT