ಮಂಗಳವಾರ, ಮಾರ್ಚ್ 2, 2021
23 °C

ಹಲವು ದಾಖಲೆಗಳಿಗೆ ಸಾಕ್ಷಿಯಾದ ‘ಗಾಬಾ ಟೆಸ್ಟ್’: ಯಾರು ಏನು ಸಾಧನೆ ಮಾಡಿದರು?

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Team India

ಬ್ರಿಸ್ಬೇನ್‌: ಇಲ್ಲಿನ ‘ಗಾಬಾ’ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯವನ್ನು 3 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಭಾರತವು 4 ಪಂದ್ಯಗಳ ಟೆಸ್ಟ್ ಸರಣಿಯನ್ನು 2–1 ಅಂತರದಿಂದ ತನ್ನದಾಗಿಸಿಕೊಂಡಿದೆ. ‘ಗಾಬಾ ಟೆಸ್ಟ್’ ಹಲವು ಮೊದಲುಗಳಿಗೂ ಸಾಕ್ಷಿಯಾಗಿದೆ.

* ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ ಸಾವಿರ ರನ್‌ ಗಳಿಸಿದ ಭಾರತದ ವಿಕೆಟ್‌ ಕೀಪರ್ ಎಂಬ ದಾಖಲೆಗೆ ರಿಷಭ್ ಪಂತ್ ಪಾತ್ರರಾದರು. ಇವರು 27 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಹಿಂದೆ ಎಂ.ಎಸ್.ಧೋನಿ ಅವರು 32 ಇನ್ನಿಂಗ್ಸ್‌ಗಳಲ್ಲಿ ಸಾವಿರ ರನ್ ಗಳಿಸಿದ ಸಾಧನೆ ಮಾಡಿದ್ದಾರೆ.

ಓದಿ: 

* ಚೇತೇಶ್ವರ್ ಪೂಜಾರ ಅವರು ಅತಿ ನಿಧಾನವಾಗಿ ಅರ್ಧಶತಕ ಪೂರೈಸಿದರು. ಅವರು 50 ರನ್ ಗಳಿಸಲು 196 ಎಸೆತ ಎದುರಿಸಿದ್ದರು. ಈ ಹಿಂದೆ ಅವರು ಸಿಡ್ನಿಯಲ್ಲಿ 174 ಎಸೆತಗಳಿಂದ 50 ರನ್ ಪೂರೈಸಿದ್ದರು.

* ಮೂರು ಬಾರಿ ಆಸ್ಟ್ರೇಲಿಯಾ ಪ್ರವಾಸ (2014–15, 2018–19, 2020–21) ಮಾಡಿದ ಶ್ರೇಯ ಪೂಜಾರ ಪಾಲಾಯಿತು. ಇವುಗಳಲ್ಲಿ ಅವರು 21 ಇನ್ನಿಂಗ್ಸ್‌ ಆಡಿ ಒಟ್ಟು 2657 ಎಸೆತ ಎದುರಿಸಿ 993 ರನ್ ಕಲೆಹಾಕಿದ್ದಾರೆ.

* ಆಸ್ಟ್ರೇಲಿಯಾ ವಿರುದ್ಧ 9 ಇನ್ನಿಂಗ್ಸ್‌ಗಳಲ್ಲಿ 200+ ಎಸೆತ ಎದುರಿಸಿದ ಏಕೈಕ ಬ್ಯಾಟ್ಸ್‌ಮನ್ ಎಂಬ ಖ್ಯಾತಿಗೂ ಪೂಜಾರ ಪಾತ್ರರಾಗಿದ್ದಾರೆ. ಸುನಿಲ್ ಗವಾಸ್ಕರ್ 8, ಸಚಿನ್ ತೆಂಡೂಲ್ಕರ್ 7 ಹಾಗೂ ವಿರಾಟ್ ಕೊಹ್ಲಿ 6 ಇನ್ನಿಂಗ್ಸ್‌ಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ 200+ ಎಸೆತ ಎದುರಿಸಿದ್ದಾರೆ.

ಓದಿ: 

* ವಿಶ್ವದ ನಂಬರ್ 1 ಬೌಲರ್ ಪ್ಯಾಟ್ ಕಮಿನ್ಸ್ ಸರಣಿಯಲ್ಲಿ ಅತಿಹೆಚ್ಚು, ಅಂದರೆ 23 ವಿಕೆಟ್ ಗಳಿಸಿದರು. ಜೋಶ್ ಹ್ಯಾಜಲ್‌ವುಡ್‌ 17 ಹಾಗೂ ಭಾರತದ ಬೌಲರ್ ಮೊಹಮ್ಮದ್ ಸಿರಾಜ್ 13 ವಿಕೆಟ್ ಕಬಳಿಸಿದ್ದಾರೆ.

* ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಸರಣಿಯೊಂದರಲ್ಲಿ ಅತಿಹೆಚ್ಚು ಆಟಗಾರರನ್ನು (20) ಭಾರತ ಈ ಸರಣಿಯಲ್ಲಿ ಬಳಸಿಕೊಂಡಿದೆ. ಈ ಹಿಂದೆ 2013–14ರಲ್ಲಿ ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ಇಂಗ್ಲೆಂಡ್‌ ತಂಡವು 18 ಆಟಗಾರರನ್ನು ಬಳಸಿಕೊಂಡಿತ್ತು. 1998–99ರ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ವೆಸ್ಟ್ ಇಂಡೀಸ್ ತಂಡ 18 ಆಟಗಾರರನ್ನು ಬಳಸಿಕೊಂಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು