ಗುರುವಾರ , ಸೆಪ್ಟೆಂಬರ್ 23, 2021
24 °C
ಟೆಸ್ಟ್‌: ರೋಹಿತ್ ಅರ್ಧಶತಕ, ಆ್ಯಂಡರ್ಸನ್‌ಗೆ 2 ವಿಕೆಟ್

ಟೆಸ್ಟ್‌ | ರಾಹುಲ್ ಶತಕ ವೈಭವ: ಮೊದಲ ದಿನ ಭಾರತ 3ಕ್ಕೆ 276

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಂಡನ್ (ಪಿಟಿಐ): ಲಾರ್ಡ್ಸ್‌ ಮೈದಾನದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಗುರುವಾರ ಸುಂದರ ಶತಕ ದಾಖಲಿಸಿದರು. ಎರಡನೇ ವಿಶ್ವ ಟೆಸ್ಟ್ ಕ್ರಿಕೆಟ್‌ ಚಾಂಪಿಯನ್‌ಷಿಪ್‌ ನಲ್ಲಿ ಶತಕ ದಾಖಲಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ರಾಹುಲ್‌ ಪಾತ್ರರಾದರು.  ಮೊದಲ ವಿಕೆಟ್ ಜೊತೆಯಾಟದಲ್ಲಿ ರೋಹಿತ್ ಅವರೊಂದಿಗೆ 126 ರನ್‌ ಸೇರಿಸಿದರು. ಅದರಿಂದಾಗಿ ತಂಡವು 90 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 276 ರನ್ ಗಳಿಸಿತು.

ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ರೋಹಿತ್ ಶರ್ಮಾ (83; 145ಎ) ಔಟಾದ ನಂತರ ರಾಹುಲ್ ಇನಿಂಗ್ಸ್‌ ಬೆಳೆಸುವ ಹೊಣೆಹೊತ್ತುಕೊಂಡರು. ರೋಹಿತ್ ಔಟಾದಾಗ ರಾಹುಲ್ 118 ಎಸೆತಗಳನ್ನು ಎದುರಿಸಿ 33 ರನ್‌ ಗಳಿಸಿದ್ದರು. 

ನಂತರ ತಮ್ಮ ಬ್ಯಾಟಿಂಗ್ ವೇಗವನ್ನು ತುಸು ಹೆಚ್ಚು ಮಾಡಿದರು. ಟೆಸ್ಟ್ ಪರಿಣತ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ (9; 23ಎ) ಲಯ ಕಂಡುಕೊಳ್ಳುವಲ್ಲಿ ಮತ್ತೊಮ್ಮೆ ವಿಫಲರಾದರು.

ನಾಯಕ ವಿರಾಟ್ ಕೊಹ್ಲಿ ಯೊಂದಿಗೂ ರಾಹುಲ್ ಅವರು ಸುಂದರ ಜೊತೆಯಾಟವಾಡಿದರು.  ಆಕರ್ಷಕ ಡ್ರೈವ್‌ಗಳು ಮತ್ತು ನೇರ ಹೊಡೆತಗಳ ಮೂಲಕ ರಾಹುಲ್ ಗಮನ ಸೆಳೆದರು. 78ನೇ ಓವರ್‌ನಲ್ಲಿ ಮಾರ್ಕ್‌ವುಡ್ ಎಸೆತವನ್ನು ಬೌಂಡರಿಗೆ ಕಳಿಸಿದ ರಾಹುಲ್ ಶತಕ ಪೂರೈಸಿದರು. 213 ಎಸೆತಗಳಲ್ಲಿ ಶತಕ ಒಡಮೂಡಿತು. ವಿರಾಟ್ ಅವರೊಂದಿಗೆ ಮೂರನೇ ವಿಕೆಟ್ ಜೊತೆಯಾಟದಲ್ಲಿ 117 ರನ್‌ ಸೇರಿಸಿದರು.  2018ರಲ್ಲಿ ಇಂಗ್ಲೆಂಡ್‌ನ ದ ಓವೆಲ್‌ನಲ್ಲಿ ಶತಕ ಬಾರಿಸಿದ ನಂತರ ರಾಹುಲ್ 100ರ ಗಡಿ ದಾಟಿದ್ದು ಇದೇ ಮೊದಲು.

ಸಂಕ್ಷಿಪ್ತ ಸ್ಕೋರು: ಭಾರತ (ಮೊದಲ ಇನಿಂಗ್ಸ್‌): 90 ಓವರ್‌ಗಳಲ್ಲಿ 3ಕ್ಕೆ 276 (ರೋಹಿತ್ ಶರ್ಮಾ 83, ಕೆ.ಎಲ್‌.ರಾಹುಲ್ ಬ್ಯಾಟಿಂಗ್ 127, ವಿರಾಟ್ ಕೊಹ್ಲಿ 42, ಅಜಿಂಕ್ಯ ರಹಾನೆ ಬ್ಯಾಟಿಂಗ್ 1; ಜೇಮ್ಸ್‌ ಆ್ಯಂಡರ್ಸನ್ 52ಕ್ಕೆ2, ಒಲಿ ರಾಬಿನ್ಸನ್ 47ಕ್ಕೆ1).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು