ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಯಲ್ಸ್‌ ಮುಂದೂಡಲಾಗದು: ಸುಶೀಲ್ ಕುಮಾರ್ ಮನವಿ ತಿರಸ್ಕರಿಸಿದ ಕುಸ್ತಿ ಒಕ್ಕೂಟ

Last Updated 3 ಜನವರಿ 2020, 16:35 IST
ಅಕ್ಷರ ಗಾತ್ರ

ನವದೆಹಲಿ:ಒಲಿಂಪಿಕ್‌ ಕ್ರಿಡಾಕೂಟಕ್ಕೆ ಕುಸ್ತಿಪಟುಗಳನ್ನು ಆಯ್ಕೆ ಮಾಡಲು ನಡೆಸಲು ಉದ್ದೇಶಿಸಿರುವ74ಕೆಜಿ ವಿಭಾಗದ ಟ್ರಯಲ್ಸ್‌ಅನ್ನು ಮುಂದೂಡುವಂತೆ ಸುಶೀಲ್ ಕುಮಾರ್ ಮಾಡಿಕೊಂಡಿದ್ದ ಮನವಿಯನ್ನುಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯೂಎಫ್‌ಐ)ನಿರಾಕರಿಸಿದೆ.

ಸದ್ಯ ಲಯಕ್ಕೆ ಮರಳಲು ನಿರಂತರ ಅಭ್ಯಾಸ ಮಾಡುತ್ತಿರುವ ಸುಶೀಲ್‌, ಇದೀಗ ಕೈ ನೋವಿನಿಂದ ಬಳಲುತ್ತಿದ್ದಾರೆ. ಹಾಗಾಗಿ ಶುಕ್ರವಾರ ನಿಗದಿಯಾಗಿರುವ ಟ್ರಯಲ್ಸ್ ಅನ್ನು ಮುಂದೂಡವಂತೆ ಮನವಿ ಮಾಡಿದ್ದರು. ಈ ಟ್ರಯಲ್ಸ್‌ನಲ್ಲಿ ಗೆದ್ದವರು ಇಟಲಿಯ ರೋಮ್‌ನಲ್ಲಿ (ಜನವರಿ 15–18) ನಡೆಯಲಿರುವ ರ‍್ಯಾಂಕಿಂಗ್‌ ಸೀರೀಸ್‌, ದೆಹಲಿಯಲ್ಲಿ(ಫೆಬ್ರುವರಿ 18–23) ನಡೆಯಲಿರುವ ಏಷ್ಯನ್‌ ಚಾಂಪಿಯನ್‌ಷಿಪ್‌ ಹಾಗೂ ಚೀನಾದ ಕ್ಸಿಯಾನ್‌ನಲ್ಲಿ(ಮಾರ್ಚ್‌ 27–29)ನಡೆಯಲಿರುವ ಏಷಿಯನಲ್‌ ಒಲಿಂಪಿಕ್‌ ಕ್ವಾಲಿಫೈಯರ್‌ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.

ಎಲ್ಲ ವರ್ಗಗಳ ಸ್ಪರ್ಧೆಗೆ ಆಯ್ಕೆ ಟ್ರಯಲ್ಸ್‌ ನಡೆಯಲಿದೆ ಎಂದಿರುವ ಡಬ್ಲ್ಯೂಎಫ್‌ಐ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌, ‘ಖಂಡಿತವಾಗಿ ಟ್ರಯಲ್ಸ್‌ ಅನ್ನು ಮುಂದೂಡುವುದಿಲ್ಲ. 74 ಕೆಜಿ ವಿಭಾಗದ ಕುಸ್ತಿಪಟುಗಳು ಭಾಗವಹಿಸಲಿದ್ದಾರೆ. ಸುಶೀಲ್‌ ಗಾಯಾಳು ಆಗಿದ್ದರೆ ನಾವೇನು ಮಾಡಲು ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.

ಏಷಿಯನಲ್‌ ಒಲಿಂಪಿಕ್‌ ಕ್ವಾಲಿಫೈಯರ್‌ ಟೂರ್ನಿಯಲ್ಲಿ ಭಾಗವಹಿಸುವುದಕ್ಕಾದರೂ ಸುಶೀಲ್‌ಗೆ ಅವಕಾಶ ಸಿಗಬಹುದೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ,‘74 ಕೆಜಿ ವಿಭಾಗದ ಟ್ರಯಲ್ಸ್‌ನಲ್ಲಿ ಗೆದ್ದವರುರ‍್ಯಾಂಕಿಂಗ್‌ ಸೀರೀಸ್‌ನಲ್ಲಿ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಗಮನಿಸುತ್ತೇವೆ. ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಒಂದು ವೇಳೆ, ಮಾರ್ಚ್‌ನಲ್ಲಿ ನಡೆಯುವ ಒಲಿಂಪಿಕ್‌ಗೆ ಕಳುಹಿಸುವ ತಂಡದಲ್ಲಿ ಸಮರ್ಥರು ಇಲ್ಲ ಎನಿಸಿದರೆ ಸುಶೀಲ್‌ ಕುಮಾರ್‌ಗೆ ಟ್ರಯಲ್ಸ್‌ನಲ್ಲಿ ಭಾಗವಹಿಸುವಂತೆ ತಿಳಿಸಲಾಗುವುದು’ ಎಂದುಡಬ್ಲ್ಯೂಎಫ್‌ಐ ಸಹ ಕಾರ್ಯದರ್ಶಿ ವಿನೋದ್‌ ತೋಮರ್‌ ಹೇಳಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಒಲಿಂಪಿಕ್‌ ‍ಪದಕ ವಿಜೇತ ಸುಶೀಲ್‌ ಕುಮಾರ್‌, ‘ನಾನು ಇನ್ನೆರಡು ವಾರಗಳಲ್ಲಿ ಫಿಟ್‌ ಆಗಲಿದ್ದೇನೆ. ಯಾವುದೇ ತೊಂದರೆಯಲ್ಲ. ನಾನು ವಾಪಸ್ಸಾಗುತ್ತೇನೆ. ನಾನು ತರಬೇತಿ ವೇಳೆ ಗಾಯಗೊಂಡಿದ್ದೆ. ಇದುಡಬ್ಲ್ಯೂಎಫ್‌ಐಗೂ ಗೊತ್ತಿದೆ. ಹೀಗಿದ್ದೂ ಅವರು ನಿಗದಿಯಂತೆ ಟ್ರಯಲ್ಸ್‌ ಮುಂದುವರಿಸಿದರೆ ಸಮಸ್ಯೆ ಏನಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT