ಬುಧವಾರ, ಮೇ 18, 2022
25 °C

ಎನ್‌ಸಿಎಗೆ ಟ್ರಾಯ್ ಕೂಲಿ ವೇಗದ ಬೌಲಿಂಗ್ ಕೋಚ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಆಸ್ಟ್ರೇಲಿಯಾದ ಖ್ಯಾತನಾಮ ಕೋಚ್ ಟ್ರಾಯ್ ಕೂಲಿ ಅವರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ವೇಗದ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಿದ್ಧತೆ ನಡೆಸಿದೆ.

ವಿಶ್ವ ಕ್ರಿಕೆಟ್‌ನಲ್ಲಿ ಶ್ರೇಷ್ಠ ವೇಗದ ಬೌಲಿಂಗ್ ಕೋಚ್ ಆಗಿರುವ ಟ್ರಾಯ್ 2005ರಲ್ಲಿ ಇಂಗ್ಲೆಂಡ್ ತಂಡದ ಕೋಚ್ ಆಗಿದ್ದರು. ಆ ಟೂರ್ನಿಯಲ್ಲಿ ಇಂಗ್ಲೆಂಡ್‌ನ ಮ್ಯಾಥ್ಯೂ ಹೊಗಾರ್ಡ್, ಆ್ಯಂಡ್ರ್ಯೂ ಫ್ಲಿಂಟಾಫ್, ಸೈಮನ್ ಜೋನ್ಸ್ ಮತ್ತು ಸ್ಟೀವ್ ಹಾರ್ಮಿಸನ್ ಅವರ ದಾಳಿಗೆ ಆಸ್ಟ್ರೇಲಿಯಾ ತಂಡ ಕುಸಿದಿತ್ತು.

‘ಟ್ರಾಯ್ ಕೂಲಿ ಅವರ ಮನವೊಲಿಸಿ ಭಾರತಕ್ಕೆ ಕೋಚ್ ಆಗಿ ಕರೆತರುವಲ್ಲಿ ಸೌರವ್ ಗಂಗೂಲಿ ಮತ್ತು ಜಯ್ ಶಾ ಅವರು ಯಶಸ್ವಿಯಾಗಿರುವುದು ದೊಡ್ಡ ಸಾಧನೆಯೇ ಸರಿ. ಇದರಿಂದಾಗಿ ಭಾರತ ಕ್ರಿಕೆಟ್‌ನಲ್ಲಿ ಭವಿಷ್ಯದ ವೇಗಿಗಳನ್ನು ರೂಪಿಸಲು ಸಾಧ್ಯವಾಗಲಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಟ್ರಾಯ್‌ ಅವರೊಂದಗೆ ಮೂರು ವರ್ಷಗಳ ಒಪ್ಪಂದ ಮಾಡಿಕೊಳ್ಳಲಾಗಿದೆಯೆಂದು ಹೇಳಲಾಗುತ್ತಿದೆ. ಎನ್‌ಸಿಎಗೆ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರೊಂದಿಗೆ ಸಮನ್ವಯ ಸಾಧಿಸಿಕೊಂಡು ಟ್ರಾಯ್ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು