ಭಾನುವಾರ, ಜೂಲೈ 5, 2020
28 °C

ಭಾರತ ತಂಡವನ್ನು ಅವರ ತವರಿನಲ್ಲಿ ಸೋಲಿಸಬೇಕು: ಲ್ಯಾಂಗರ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್: ಭಾರತ ಕ್ರಿಕೆಟ್ ತಂಡವನ್ನು ಅದರ ತವರುನೆಲದಲ್ಲಿಯೇ ಸೋಲಿಸಬೇಕು. ಅವರು ಇಲ್ಲಿಗೆ ಬಂದಾಗಲೂ ಸೋಲಿಸಬೇಕೆಂಬುದೇ ನಮ್ಮ ಗುರಿ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.

ಆಸ್ಟ್ರೇಲಿಯಾ ತಂಡವು ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ ಕುರಿತು ಪ್ರತಿಕ್ರಿಯಸಿದ ಅವರು, ‘ನಮ್ಮ ಆಟಗಾರರಲ್ಲಿ ಇದು ಹೊಸ ಹುಮ್ಮಸ್ಸು ಹುಟ್ಟುಹಾಕಿದೆ.  ಶ್ರೇಷ್ಠ ತಂಡಗಳನ್ನು ಸೋಲಿಸುವುದರೊಂದಿಗೆ ಮತ್ತಷ್ಟು ಶ್ರೇಷ್ಠರಾಗಬೇಕು. ಕಠಿಣ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದಾಗಲೇ ಉನ್ನತ ಸ್ಥಾನಕ್ಕೇರಲು ಸಾಧ್ಯ’ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು