ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಎಡಗೈ ಸ್ಪಿನ್ನರ್ ರಾಧಾ ಯಾದವ್ ಮತ್ತು ಮಧ್ಯಮವೇಗಿ ಮೆರಿಜಾನೆ ಕಾಪ್ ಅವರ ನಿಖರ ದಾಳಿಯ ಮುಂದೆ ಯು.ಪಿ ವಾರಿಯರ್ಸ್ ಸಾಧಾರಣ ಮೊತ್ತಕ್ಕೆ ಕುಸಿಯಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಯು.ಪಿ ತಂಡವು 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 119 ರನ್ ಗಳಿಸಿತು.

ಟಾಸ್ ಗೆದ್ದ ಡೆಲ್ಲಿ ತಂಡವು ಫೀಲ್ಡಿಂಗ್ ಮಾಡುವ ನಿರ್ಧಾರ ಮಾಡಿತು. ತಂಡದ ನಾಯಕಿ ಮೆಗ್ ಲ್ಯಾನಿಂಗ್ ನಿರ್ಧಾರವನ್ನು ತಂಡದ ಬೌಲರ್ಗಳು ಸಮರ್ಥಿಸಿಕೊಂಡರು.ದಕ್ಷಿಣ ಆಫ್ರಿಕಾದ ಕಾಪ್ (5ಕ್ಕೆ3) ಅಗ್ರಕ್ರಮಾಂಕದ ಬ್ಯಾಟರ್ಗಳ ವಿಕೆಟ್ ಕಬಳಿಸಿದರು.

ಇನಿಂಗ್ಸ್ನ ಮೂರನೇ ಓವರ್ನಲ್ಲಿ ಆರಂಭಿಕ ಬ್ಯಾಟರ್ ವೃಂದಾ ದಿನೇಶ್ ಅವರಿಗೆ ಖಾತೆ ತೆರೆಯಲೂ ಕಾಪ್ ಬಿಡಲಿಲ್ಲ. ನಂತರ ತಹಿಲಿಯಾ ಮೆಕ್ಗ್ರಾ (1) ಹಾಗೂ ಅಲಿಸಾ ಹೀಲಿ ವಿಕೆಟ್ಗಳನ್ನೂ ಕಾಪ್ ಕಬಳಿಸಿದರು.

ಮಹಾರಾಷ್ಟ್ರದ ಹುಡುಗಿ ರಾಧಾ ಯಾದವ್ (20ಕ್ಕೆ4) ಮಧ್ಯಮ ಕ್ರಮಾಂಕದ ಬ್ಯಾಟರ್ಗಳನ್ನು ಪೆವಿಲಿಯನ್ಗೆ ಮರಳಿ ಕಳಿಸಿದರು. ಇದರಿಂದಾಗಿ ತಂಡವು 12 ಓವರ್ಗಳಲ್ಲಿ ಕೇವಲ 57 ರನ್ಗಳಿಗೆ ಐದು ವಿಕೆಟ್ ಕಳೆದುಕೊಂಡಿತು. ಯುಪಿ ತಂಡದ ಐದನೇ ಕ್ರಮಾಂಕದ ಬ್ಯಾಟರ್ ಶ್ವೇತಾ ಸೆಹ್ರಾವತ್ (45; 42ಎ, 4X5, 6X1) ಅವರೊಬ್ಬರೇ ದಿಟ್ಟ ಹೋರಾಟ ನಡೆಸಿದರು.

ಒಂದು ಕಡೆ ವಿಕೆಟ್ಗಳು ಪತನವಾಗುತ್ತಿದ್ದರೂ ಶ್ವೇತಾ 107. 14ರ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಿದರು. ಇದರಿಂದಾಗಿ ತಂಡವು ನೂರರ ಗಡಿ ದಾಟಲು ಸಾಧ್ಯವಾಯಿತು. ಇಲ್ಲದಿದ್ದರೆ ಅಲ್ಪಮೊತ್ತಕ್ಕೆ ಕುಸಿಯವ ಆತಂಕ ಇತ್ತು.

ಸಂಕ್ಷಿಪ್ತ ಸ್ಕೋರ್: ಯು.ಪಿ. ವಾರಿಯರ್ಸ್: 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 119 (ಅಲಿಸಾ ಹೀಲಿ 13, ಗ್ರೇಸ್ ಹ್ಯಾರಿಸ್ 17, ಶ್ವೇತಾ ಸೆಹ್ರಾವತ್ 45, ಮರಿಜಾನೆ ಕಾಪ್ 5ಕ್ಕೆ3, ಅರುಂಧತಿ ರೆಡ್ಡಿ 16ಕ್ಕೆ1, ರಾಧಾ ಯಾದವ್ 20ಕ್ಕೆ4)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.