ಮೂರನೇ ಸ್ಥಾನದಲ್ಲಿ ಮಂದಾನ ಸ್ಥಿರ

ದುಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಅವರು ಐಸಿಸಿ ಟಿ20 ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಸ್ಮೃತಿ ಮಂದಾನ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಶೆಫಾಲಿ ಅವರ ಬಳಿ ಸದ್ಯ 726 ರೇಟಿಂಗ್ ಪಾಯಿಂಟ್ಸ್ ಇದ್ದರೆ, ಮಂದಾನ 709 ಪಾಯಿಂಟ್ಸ್ ಹೊಂದಿದ್ದಾರೆ. ಆಸ್ಟ್ರೇಲಿಯಾದ ಬೇಥ್ ಮೂನಿ (754) ಅಗ್ರಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾ ತಂಡ ನಾಯಕಿ ಮೆಗ್ ಲ್ಯಾನಿಂಗ್ (4ನೇ ಸ್ಥಾನ) ಹಾಗೂ ಅಲೀಸಾ ಹೀಲಿ (ಆರನೇ ಸ್ಥಾನ) ಕೂಡ ಅಗ್ರ 10ರ ಪಟ್ಟಿಯಲ್ಲಿದ್ದಾರೆ.
ನ್ಯೂಜಿಲೆಂಡ್‌ನ ಸೋಫಿ ಡಿವೈನ್ ಮತ್ತು ಸುಜಿ ಬೇಟ್ಸ್ ಕ್ರಮವಾಗಿ ಐದು ಮತ್ತು ಏಳನೇ ಕ್ರಮಾಂಕಗಳಲ್ಲಿದ್ದಾರೆ.
ಬೌಲರ್‌ಗಳ ವಿಭಾಗದಲ್ಲಿ ಭಾರತದ ರಾಜೇಶ್ವರಿ ಗಾಯಕವಾಡ್ 12ನೇ ಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಅವರು ಒಟ್ಟು ಐದು ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡಿದ್ದರು. ಆಲ್‌ರೌಂಡರ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಆ್ಯಶ್ಲಿ ಗಾರ್ಡನರ್ 10ನೇ ಸ್ಥಾನದಲ್ಲಿದ್ದಾರೆ. ಅದೇ ತಂಡದ ಜಾರ್ಜಿಯಾ ವಾರೆಹಮ್ 14 ಸ್ಥಾನಗಳ ಏರಿಕೆ ದಾಖಲಿಸಿದ್ದು, ಸದ್ಯ ಜೀವನಶ್ರೇಷ್ಠ 48ನೇ ಸ್ಥಾನಕ್ಕೇರಿದ್ದಾರೆ.
ಭಾರತದ ಎದುರು ಅವರು ಮೂರು ಪಂದ್ಯಗಳಲ್ಲಿ 23 ರನ್ ಹಾಗೂ ಮೂರು ವಿಕೆಟ್ ಗಳಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.