ಢಾಕಾ: ಬಾಂಗ್ಲಾದೇಶದ ಅನುಭವಿ ಆಟಗಾರ ಮಹಮದುಲ್ಲಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್ಗೆ ಬುಧವಾರ ವಿದಾಯ ಹೇಳಿದ್ದಾರೆ.

39 ವರ್ಷದ ಮಹಮದುಲ್ಲಾ, 'ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಹೊಂದಲು ನಿರ್ಧರಿಸಿದ್ದೇನೆ' ಎಂದು ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದ್ದಾರೆ.

ಟೆಸ್ಟ್ ಕ್ರಿಕೆಟ್ಗೆ 2021ರಲ್ಲಿ ಹಾಗೂ ಟಿ20 ಮಾದರಿಗೆ 2024ರಲ್ಲಿ ನಿವೃತ್ತಿ ಘೋಷಿಸಿದ್ದ ಅವರು, ಇದೀಗ ಏಕದಿನ ಕ್ರಿಕೆಟ್ನಿಂದಲೂ ದೂರ ಸರಿಯಲಿದ್ದಾರೆ.

ಈ ಆಟಗಾರ, ಬಾಂಗ್ಲಾದೇಶ ಪರ ಏಕದಿನ ಮಾದರಿಯಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

239 ಏಕದಿನ ಪಂದ್ಯಗಳ 209 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅವರು, 4 ಶತಕ ಮತ್ತು 32 ಅರ್ಧಶತಕ ಸಹಿತ 36.46ರ ಸರಾಸರಿಯಲ್ಲಿ 5,689 ರನ್ ಗಳಿಸಿದ್ದಾರೆ. 153 ಇನಿಂಗ್ಸ್ಗಳಲ್ಲಿ ಬೌಲಿಂಗ್ ಸಹ ಮಾಡಿರುವ ಈ ಕ್ರಿಕೆಟಿಗ 82 ವಿಕೆಟ್ಗಳನ್ನೂ ಕಬಳಿಸಿದ್ದಾರೆ.

ಮಹಮದುಲ್ಲಾ ತಮ್ಮ ನಾಲ್ಕೂ ಶತಕಗಳನ್ನು ಐಸಿಸಿ ಟೂರ್ನಿಗಳಲ್ಲೇ ಗಳಿಸಿರುವುದು ವಿಶೇಷ. 2015ರ ಏಕದಿನ ವಿಶ್ವಕಪ್ನಲ್ಲಿ ಬೆನ್ನುಬೆನ್ನಿಗೆ ಎರಡು ಶತಕ ಬಾರಿಸಿದ್ದ ಅವರು, 2017ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಒಂದು ಹಾಗೂ 2023ರ ಏಕದಿನ ವಿಶ್ವಕಪ್ನಲ್ಲಿ ಮತ್ತೊಂದು ಶತಕ ಸಿಡಿಸಿದ್ದರು.

ಫೇಸ್ಬುಕ್ನಲ್ಲಿ ಹಂಚಿಕೊಂಡಿರುವ ಪೋಸ್ಟ್ನಲ್ಲಿ, 'ಸದಾ ಬೆಂಬಲಿಸಿದ ನನ್ನ ತಂಡದ ಎಲ್ಲ ಸದಸ್ಯರು, ತರಬೇತುದಾರು ಹಾಗೂ ವಿಶೇಷವಾಗಿ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.