ಶನಿವಾರ, ಮಾರ್ಚ್ 25, 2023
28 °C

Womens IPL | ₹951 ಕೋಟಿಗೆ ಮಾಧ್ಯಮ ಹಕ್ಕು ತನ್ನದಾಗಿಸಿಕೊಂಡ ವಯಕಾಮ್ 18

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಮಹಿಳೆಯರ ಇಂಡಿಯನ್ ಪ್ರೀಮಿಯರ್ ಲೀಗ್(ಎಂಐಪಿಎಲ್) ಕ್ರಿಕೆಟ್ ಟೂರ್ನಿಯ ಮೊದಲ 5 ಆವೃತ್ತಿಗಳ ಮಾಧ್ಯಮ ಹಕ್ಕನ್ನು ವಯಕಾಮ್‌ 18 ತನ್ನದಾಗಿಸಿಕೊಂಡಿದೆ. ಹರಾಜಿನಲ್ಲಿ ಡಿಸ್ನಿ ಸ್ಟಾರ್, ಸೋನಿ ಕಂಪನಿಗಳನ್ನು ಹಿಂದಿಕ್ಕಿ ಹಕ್ಕು ಪಡೆದಿದೆ.

ಸೋಮವಾರ ಹರಾಜು ಪ್ರಕ್ರಿಯೆ ಮುಗಿದಿದ್ದು, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ಧಾರೆ.

‘ಮುಂದಿನ ಐದು ವರ್ಷಗಳಿಗೆ (2023–27)ಎಂಐಪಿಎಲ್ ಮಾಧ್ಯಮ ಹಕ್ಕಿಗೆ ವಯಕಾಮ್ 18 ಸಂಸ್ಥೆಯು ₹951 ಕೋಟಿಗೆ ಒಪ್ಪಂದ ಮಾಡಿಕೊಂಡಿದೆ. ಪ್ರತಿ ಪಂದ್ಯದ ಮೌಲ್ಯ ₹7.09 ಕೋಟಿ ಆಗಿದೆ’ ಎಂದು ಶಾ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

ಶುಭಾಶಯಗಳು ವಯಕಾಮ್ 18, ಬಿಸಿಸಿಐ ಮೇಲೆ ನೀವು ಇಟ್ಟಿರುವ ಭರವಸೆಗೆ ಧನ್ಯವಾದ ಎಂದೂ ಸಹ ಅವರು ಹೇಳಿದ್ದಾರೆ.

‘ಮಹಿಳೆಯರ ಐಪಿಎಲ್‌ಗೆ ಮಾಧ್ಯಮ ಹಕ್ಕು ಹರಾಜು ಮತ್ತೊಂದು ಐತಿಹಾಸಿಕ ಸಂಗತಿಯಾಗಿದೆ. ಈ ಸರಣಿಯು ಭಾರತದಲ್ಲಿ ಮಹಿಳೆಯರ ಕ್ರಿಕೆಟ್ ಸಬಲೀಕರಣದ ದೃಷ್ಟಿಯಿಂದ ಅತಿ ದೊಡ್ಡ ಮತ್ತು ನಿರ್ಣಾಯಕ ಹೆಜ್ಜೆ ಯಾಗಿದೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಚೊಚ್ಚಲ ಮಹಿಳೆಯರ ಐಪಿಎಲ್ ಸರಣಿಯು ಮಾರ್ಚ್ ಮೊದಲ ವಾರದಲ್ಲಿ ಆರಂಭವಾಗುವ ನಿರೀಕ್ಷೆ ಇದೆ. 5 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ಎಲ್ಲ ಪಂದ್ಯಗಳು ಮುಂಬೈನಲ್ಲಿ ನಡೆಯಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು