ಅಹಮದಾಬಾದ್: ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ಅವರು ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ನಾಲ್ಕನೇ ಶತಕ ದಾಖಲಿಸಿದರು. ಅದರೊಂದಿಗೆ ಕರ್ನಾಟಕ ತಂಡವು ತ್ರಿಪುರ ಎದುರು ಜಯಿಸಿ, ಎ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಶನಿವಾರ ಇಲ್ಲಿ ನಡೆದ ಟೂರ್ನಿಯ ಐದನೇ ಪಂದ್ಯದಲ್ಲಿ ಕರ್ನಾಟಕ ತಂಡವು 80 ರನ್ಗಳಿಂದ ತ್ರಿಪುರ ತಂಡವನ್ನು ಹಣಿಯಿತು. ಅದರೊಂದಿಗೆ ಅಜೇಯ ಓಟವನ್ನು ಮುಂದುವರಿಸಿತು. ಒಟ್ಟು 20 ಅಂಕಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ಇಲ್ಲಿಯವರೆಗೆ ಅಗ್ರಸ್ಥಾನದಲ್ಲಿದ್ದ ಮಧ್ಯಪ್ರದೇಶ ತಂಡವು ಪುದುಚೇರಿ ಎದುರು 4 ವಿಕೆಟ್ಗಳಿಂದ ಸೋತು ಎರಡನೇ ಸ್ಥಾನಕ್ಕಿಳಿಯಿತು.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ತ್ರಿಪುರ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇನಿಂಗ್ಸ್ನ ಮೂರನೇ ಓವರ್ನಲ್ಲಿಯೇ ಅಭಿಜಿತ್ ಸರ್ಕಾರ್ ಅವರು ಮಯಂಕ್ ಅಗರವಾಲ್ (5 ರನ್) ಮತ್ತು ಕರುಣ್ ನಾಯರ್ ಅವರ ವಿಕೆಟ್ಗಳನ್ನು ಕಬಳಿಸಿದರು. ನಾಯರ್ ಖಾತೆ ತೆರೆಯದೇ ಮರಳಿದರು. ಆಗ ತಂಡದ ಖಾತೆಯಲ್ಲಿ ಕೇವಲ ಆರು ರನ್ಗಳು ಮಾತ್ರ ಇದ್ದವು. ಆದರೆ ಅಮೋಘ ಲಯದಲ್ಲಿರುವ ದೇವದತ್ತ ಅವರನ್ನು ಕಟ್ಟಿಹಾಕಲು ತ್ರಿಪುರ ಬೌಲರ್ಗಳಿಗೆ ಸಾಧ್ಯವಾಲಿಲ್ಲ. ದೇವದತ್ತ (108; 120ಎ, 4X8, 6X3) ಮತ್ತು ಸ್ಮರಣ್ ರವಿಚಂದ್ರನ್ (60; 82ಎ, 4X8) 3ನೇ ವಿಕೆಟ್ ಜೊತೆಯಾಟದಲ್ಲಿ 136 ರನ್ ಸೇರಿಸಿದರು. ತಂಡವು 50 ಓವರ್ಗಳಲ್ಲಿ 7 ವಿಕೆಟ್ಗಳಿಗೆ 332 ರನ್ಗಳ ದೊಡ್ಡ ಮೊತ್ತ ಗಳಿಸಲು ಈ ಜೊತೆಯಾಟವು ಬುನಾದಿಯಾಯಿತು. ಅದಕ್ಕುತ್ತರವಾಗಿ ತ್ರಿಪುರ ತಂಡವು 49 ಓವರ್ಗಳಲ್ಲಿ 252 ರನ್ ಗಳಿಸಿತು.

ಸ್ಮರಣ್ ಅವರು ವಿಕಿ ಸಹಾ ಅವರ ಬೌಲಿಂಗ್ನಲ್ಲಿ ಔಟಾಗುವುದರೊಂದಿಗೆ ಜೊತೆಯಾಟ ಮುರಿಯಿತು. ಆದರೆ ಭಾರತ ತಂಡದ ಅನುಭವಿ ಕೆ.ಎಲ್. ರಾಹುಲ್ (35; 28ಎ, 4X4, 6X1) ಇನಿಂಗ್ಸ್ಗೆ ಬಲ ತುಂಬಿದರು. ದೇಶಿ ಕ್ರಿಕೆಟ್ನಲ್ಲಿ ಆಡುವ ಕಡ್ಡಾಯ ನಿಯಮದಡಿಯಲ್ಲಿ ರಾಹುಲ್ ಅವರು ಈ ಟೂರ್ನಿಯಲ್ಲಿ ಮೊದಲ ಪಂದ್ಯವಾಡಿದರು. ಇಬ್ಬರೂ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 65 ರನ್ ಸೇರಿಸಿದರು.

ಅಭಿನವ್ ಅಬ್ಬರ: ರಾಹುಲ್ ಔಟಾದಾಗ ಇನಿಂಗ್ಸ್ನಲ್ಲಿ ಇನ್ನೂ 12 ಓವರ್ಗಳು ಬಾಕಿ ಇದ್ದವು. ಕರ್ನಾಟಕದ ಖಾತೆಯಲ್ಲಿ 207 ರನ್ಗಳಿದ್ದವು. ಆದರೆ ಕ್ರೀಸ್ಗೆ ಬಂದ ಅಭಿನವ್ ಮನೋಹರ್ ಬೌಲರ್ಗಳಿಗೆ ಬಿಸಿ ಮುಟ್ಟಿಸಿದರು. 43 ಎಸೆತಗಳಲ್ಲಿ ಔಟಾಗದೇ 79 ರನ್ ಗಳಿಸಿದರು. ಅದರಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ಇದ್ದವು. ಅಭಿನವ್ ಮತ್ತು ದೇವದತ್ತ ಜೊತೆಗೂಡಿ 40 ಎಸೆತಗಳಲ್ಲಿ 58 ರನ್ ಹೊಡೆದರು.

ಅಭಿವನ್ ಮತ್ತು ಶ್ರೇಯಸ್ ಗೋಪಾಲ್ ಕೂಡ 29 ಎಸೆತಗಳಲ್ಲಿ 58 ರನ್ ಹೊಡೆದರು. ಇದರಿಂದಾಗಿ ತಂಡದ ಮೊತ್ತ ಬೆಳೆಯಿತು.

ಗುರಿ ಬೆನ್ನಟ್ಟಿದ ತ್ರಿಪುರ ತಂಡದ ಆರಂಭ ಚೆನ್ನಾಗಿರಲಿಲ್ಲ. ವೇಗಿ ವೈಶಾಖ ವಿಜಯಕುಮಾರ್, ವಿದ್ಯಾಧರ್ ಪಾಟೀಲ ಹಾಗೂ ಪ್ರಸಿದ್ಧಕೃಷ್ಣ ಅವರ ಅಮೋಘ ಬೌಲಿಂಗ್ ರಂಗೇರಿತು. ಇದರಿಂದಾಗಿ ತಂಡವು ತಂಡವು 59 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತು.

ಈ ಹಂತದಲ್ಲಿ ರಜತ್ ಡೇ (66; 102ಎ) ಮತ್ತು ಶತಕ ಬಾರಿಸಿದ ಸ್ವಪ್ನಿಲ್ ಸಿಂಗ್ (100; 93ಎ, 4X7, 6X2) ಮಿಂಚಿದರು. ಆದರೆ ತಂಡವನ್ನು ಗೆಲುವಿನ ದಡ ಸೇರಿಸಲು ಅವರಿಗೆ ಸಾಧ್ಯವಾಗಲಿಲ್ಲ.

ಸಂಕ್ಷಿಪ್ತ ಸ್ಕೋರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ: 50 ಓವರ್ಗಳಲ್ಲಿ 7ಕ್ಕೆ332 (ದೇವದತ್ತ ಪಡಿಕ್ಕಲ್ 108, ಆರ್. ಸ್ಮರಣ್ 60, ಕೆ.ಎಲ್. ರಾಹುಲ್ 35, ಅಭಿನವ್ ಮನೋಹರ್ ಔಟಾಗದೇ 79, ಶ್ರೇಯಸ್ ಗೋಪಾಲ್ 29, ಅಭಿಜಿತ್ ಸರ್ಕಾರ್ 50ಕ್ಕೆ4) ತ್ರಿಪುರ ಕ್ರಿಕೆಟ್ ಸಂಸ್ಥೆ: 49 ಓವರ್ಗಳಲ್ಲಿ 252 (ತೇಜಸ್ವಿ ಜೈಸ್ವಾಲ್ 25, ರಜತ್ ಡೇ 66, ಸ್ವಪ್ನಿಲ್ ಸಿಂಗ್ 100, ಸೆಂತು ಸರ್ಕಾರ್ ಔಟಾಗದೇ 26, ವಿ. ವೈಶಾಖ 54ಕ್ಕೆ3, ಶ್ರೇಯಸ್ ಗೋಪಾಲ್ 33ಕ್ಕೆ3) ಕರ್ನಾಟಕ ತಂಡಕ್ಕೆ 80 ರನ್ಗಳ ಜಯ.

ಪಂದ್ಯದ ಆಟಗಾರ: ದೇವದತ್ತ ಪಡಿಕ್ಕಲ್
.ಮುಂದುವರಿದ ಪಡಿಕ್ಕಲ್ ಬ್ಯಾಟಿಂಗ್ ವೈಭವ: ಕೊನೆಯ 5 ಇನಿಂಗ್ಸ್ಗಳಲ್ಲಿ 4 ಶತಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.