ಬೆಂಗಳೂರು: ರನ್ ಮೆಶಿನ್ ಖ್ಯಾತಿಯ ವಿರಾಟ್ ಕೊಹ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಪರ 9,000 ರನ್ಗಳ ಮೈಲಿಗಲ್ಲು ತಲುಪಿದ್ದಾರೆ. ಆ ಮೂಲಕ ತಂಡವೊಂದರ ಪರ 9,000 ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಈ ಪೈಕಿ ಐಪಿಎಲ್ನಲ್ಲಿ ಆರ್ಸಿಬಿ ಪರ ಕೊಹ್ಲಿ 8,606 ರನ್ ಗಳಿಸಿದ್ದಾರೆ. ಹಾಗೆಯೇ ಚಾಂಪಿಯನ್ಸ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆರ್ಸಿಬಿ ಪರ 424 ರನ್ ಪೇರಿಸಿದ್ದಾರೆ.

ತಂಡವೊಂದರ ಪರ ಗರಿಷ್ಠ ರನ್ ಸಾಧನೆ:

ವಿರಾಟ್ ಕೊಹ್ಲಿ (ಆರ್ಸಿಬಿ): 9004*

ರೋಹಿತ್ ಶರ್ಮಾ (ಮುಂಬೈ ಇಂಡಿಯನ್ಸ್): 6,060

ಜೇಮ್ಸ್ ವಿನ್ಸ್ (ಹ್ಯಾಂಪ್ಶೈರ್): 5,934

ಸುರೇಶ್ ರೈನಾ (ಚೆನ್ನೈ ಸೂಪರ್ ಕಿಂಗ್ಸ್): 5,528

ಮಹೇಂದ್ರ ಸಿಂಗ್ ಧೋನಿ (ಚೆನ್ನೈ ಸೂಪರ್ ಕಿಂಗ್ಸ್): 5,314

ವಾರ್ನರ್ ದಾಖಲೆ ಮುರಿದ ಕಿಂಗ್ ಕೊಹ್ಲಿ

ಮಂಗಳವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕದ ಸಾಧನೆ ಮಾಡಿದ್ದಾರೆ. ಆ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ಬ್ಯಾಟರ್ (63) ಎಂದೆನಿಸಿದ್ದಾರೆ.

ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವಿಡ್ ವಾರ್ನರ್ (62) ದಾಖಲೆಯನ್ನು ಮುರಿದಿದ್ದಾರೆ. ಇನ್ನು ಐಪಿಎಲ್ನಲ್ಲಿ ಅತಿ ಹೆಚ್ಚು ಅರ್ಧಶತಕ ಹಾಗೂ ಅದಕ್ಕಿಂತಲೂ ಹೆಚ್ಚು ರನ್ ಗಳಿಸಿದ (ಶತಕ ಸೇರಿದಂತೆ) ಬ್ಯಾಟರ್ಗಳ ಸಾಲಿನಲ್ಲೂ ಕೊಹ್ಲಿ (71) ಮುಂದಿದ್ದಾರೆ. ಐಪಿಎಲ್ನಲ್ಲಿ ಕೊಹ್ಲಿ ಎಂಟು ಶತಕಗಳನ್ನು ಹೊಂದಿದ್ದಾರೆ.

ಒಂದೇ ಆವೃತ್ತಿಯಲ್ಲಿ ಎಂಟನೇ ಅರ್ಧಶತಕ ಸಾಧನೆ...

ಐಪಿಎಲ್ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ಬ್ಯಾಟರ್ ಎಂಬ ದಾಖಲೆಗೂ ಕೊಹ್ಲಿ ಭಾಜನರಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಎಂಟನೇ ಸಲ ಅರ್ಧಶತಕದ ಸಾಧನೆ ಮಾಡಿದ್ದಾರೆ.

5ನೇ ಸಲ 600ಕ್ಕೂ ಹೆಚ್ಚು ರನ್ ಸಾಧನೆ...

ಐಪಿಎಲ್ ಋತುವಿನಲ್ಲಿ ಐದನೇ ಬಾರಿ ಕೊಹ್ಲಿ 600ಕ್ಕೂ ಹೆಚ್ಚು ರನ್ ದಾಖಲೆ ಬರೆದಿದ್ದಾರೆ. ಈ ಹಿಂದೆ 2013, 2016, 2013 ಹಾಗೂ 2024ರ ಆವೃತ್ತಿಗಳಲ್ಲೂ 600ಕ್ಕೂ ಹೆಚ್ಚು ರನ್ ಕಲೆ ಹಾಕಿದ್ದರು.

ಐಪಿಎಲ್ ಋತುವಿನಲ್ಲಿ 600ಕ್ಕೂ ಹೆಚ್ಚು ರನ್ ಸಾಧನೆ:

ವಿರಾಟ್ ಕೊಹ್ಲಿ: 5 (2013, 2016, 2023, 2024, 2025)

ಕೆ.ಎಲ್.ರಾಹುಲ್: 4 (2018, 2020, 2021, 2022)

ಕ್ರಿಸ್ ಗೇಲ್: 3 (2011, 2012, 2013)

ಡೇವಿಡ್ ವಾರ್ನರ್: 3 (2016, 2017, 2019)

ಇನ್ನು ಪ್ರಸಕ್ತ ಸಾಲಿನ ರನ್ ಬೇಟೆಯಲ್ಲಿ ಕೊಹ್ಲಿ ಅಗ್ರ ಐದರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಗುಜರಾತ್ ಟೈಟನ್ಸ್ನ ಸಾಯಿ ಸುದರ್ಶನ್ (679) ಮುಂಚೂಣಿಯಲ್ಲಿದ್ದಾರೆ.
.IPL 2025 Playoffs: ಆರ್ಸಿಬಿ vs ಪಂಜಾಬ್; ಗುಜರಾತ್ vs ಮುಂಬೈ ಹಣಾಹಣಿ.IPL | ಜಿತೇಶ್, ಕೊಹ್ಲಿ ಅಬ್ಬರ; ತವರಿನಾಚೆ ಎಲ್ಲ 7 ಪಂದ್ಯಗಳಲ್ಲಿ ಗೆಲುವಿನ ದಾಖಲೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.