ವಿಶಾಖಪಟ್ಟಣ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಗೆಲುವಿನ ಬಳಿಕ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ಕೋಚ್ ಗೌತಮ್ ಗಂಭೀರ್ ಅವರ ನಡುವಣ ವರ್ತನೆಯು ಇಬ್ಬರ ನಡುವೆ ಎಲ್ಲವೂ ಸರಿಯಾಗಿಲ್ಲವೇ ಎಂಬ ಅನುಮಾನ ಮೂಡಿಸಿದೆ.

ಈ ಸಂಬಂಧ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ವಿಶಾಖಪಟ್ಟಣದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಒಂಬತ್ತು ವಿಕೆಟ್ ಅಂತರದ ಗೆಲುವು ದಾಖಲಿಸಿದ ಭಾರತ, 2-1ರ ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತ್ತು.

ಪಂದ್ಯದ ಬಳಿಕ ಪೆವಿಲಿಯನ್ನತ್ತ ಹೆಜ್ಜೆ ಹಾಕಿದ ವಿರಾಟ್ ಅವರಿಗೆ ಸಹ ಆಟಗಾರರು ತಬ್ಬಿಕೊಂಡು ಅಭಿನಂದಿಸಿದರು. ರೋಹಿತ್ ಶರ್ಮಾ ಸಹ ತಬ್ಬಿಕೊಂಡು ಶಭಾಷ್ಗಿರಿ ಹೇಳಿದರು.

ಆದರೆ ಕೋಚ್ ಗಂಭೀರ್ ಅವರನ್ನು ಸಮೀಪಿಸಿದಾಗ ಇಬ್ಬರ ನಡುವಣ ದೇಹಭಾಷೆಯು ಅಭಿಮಾನಿಗಳ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
.IND vs SA: ಕಳೆದ 2-3 ವರ್ಷಗಳಲ್ಲಿ ಈ ತರ ಆಡಲೇ ಇಲ್ಲ ಎಂದ ವಿರಾಟ್ ಕೊಹ್ಲಿ.Rohit Sharma| 20,000 ರನ್ ಮೈಲಿಗಲ್ಲು: ಸಚಿನ್, ಕೊಹ್ಲಿ ಸಾಲಿಗೆ ರೋಹಿತ್ ಶರ್ಮಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.