ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್ ಕೊಹ್ಲಿ ಸತತ ನಾಲ್ಕನೇ ವರ್ಷವೂ ಅತಿ ಮೌಲ್ಯಯುತ ಸೆಲೆಬ್ರಿಟಿ

Last Updated 4 ಫೆಬ್ರುವರಿ 2021, 10:46 IST
ಅಕ್ಷರ ಗಾತ್ರ

ಮುಂಬೈ: 237.7 ಮಿಲಿಯನ್ ಡಾಲರ್ಬ್ರಾಂಡ್ ಮೌಲ್ಯದೊಂದಿಗೆ ಖ್ಯಾತ ಕ್ರಿಕೆಟಿಗಟೀಮ್ ಇಂಡಿಯಾ ನಾಯಕ, ವಿರಾಟ್ ಕೊಹ್ಲಿ 2020 ರಲ್ಲಿ ಸತತ ನಾಲ್ಕನೇ ವರ್ಷವೂ ಮೋಸ್ಟ್ ವ್ಯಾಲ್ಯುಬಲ್(ಅತಿ ಮೌಲ್ಯಯುತ) ಸೆಲೆಬ್ರಿಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇನ್ನೂ ರ್‍ಯಾಂಕಿಂಗ್‌ನ ಎರಡನೇ ಮತ್ತು ಮೂರನೇ ಸ್ಥಾನದಲ್ಲಿ ಕ್ರಮವಾಗಿ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ ಮತ್ತು ರಣವೀರ್ ಸಿಂಗ್ ಇದ್ಧಾರೆ.

ಹೆಚ್ಚು ಮೌಲ್ಯಯುತ ಹತ್ತು ಪ್ರಮುಖ ಖ್ಯಾತನಾಮರಲ್ಲಿ, ಕೊಹ್ಲಿ ಏಕೈಕ ಕ್ರೀಡಾ ಕ್ಷೇತ್ರದ ಸೆಲೆಬ್ರಿಟಿಯಾಗಿದ್ದಾರೆ. ಇನ್ನುಳಿದ ಒಂಬತ್ತು ಮಂದಿ ಚಲನಚಿತ್ರ ತಾರೆಯರಾಗಿದ್ದಾರೆ.

2020 ರಲ್ಲಿ ಅಗ್ರ 20 ಖ್ಯಾತನಾಮರು ತಮ್ಮ ಒಟ್ಟು ಮೌಲ್ಯದ ಶೇಕಡಾ 5 ರಷ್ಟು ಮೌಲ್ಯವನ್ನು ಕಳೆದುಕೊಂಡಿದ್ದಾರೆ. ಆದರೆ, ಕೊಹ್ಲಿಯ ಬ್ರಾಂಡ್ ಮೌಲ್ಯ ಮಾತ್ರ ಯಥಾಸ್ಥಿತಿ ಕಾಯ್ದುಕೊಂಡಿದೆ ಎಂದು ಬ್ರಾಂಡ್ ಮೌಲ್ಯಮಾಪನದಲ್ಲಿ ಪರಿಣತಿ ಹೊಂದಿರುವ ಡಫ್ ಮತ್ತು ಫೆಲ್ಪ್ಸ್ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಕೋವಿಡ್–19 ಸೋಂಕಿನ ಹಾವಳಿ ಹೊರತಾಗಿಯೂ 2020 ರಲ್ಲಿ 237.7 ಮಿಲಿಯನ್ ಅಮೆರಿಕ ಡಾಲರ್ ಸ್ಥಿರ ಬ್ರಾಂಡ್ ಮೌಲ್ಯ ಹೊಂದಿರುವ ಕೊಹ್ಲಿ ಸತತ ನಾಲ್ಕನೇ ವರ್ಷವೂ ಹೆಚ್ಚು ಮೌಲ್ಯಯುತ ಸೆಲೆಬ್ರಿಟಿಯಾಗಿ ಉಳಿದಿದ್ದಾರೆ ಎಂದು ಅದು ಹೇಳಿದೆ.

ಅಕ್ಷಯ್ ಕುಮಾರ್ ಶೇ. 13.8ರಷ್ಟು ಜಿಗಿತದೊಂದಿಗೆ 118.9 ಮಿಲಿಯನ್ ಡಾಲರ್ ಬ್ರಾಂಡ್ ಮೌಲ್ಯದ ಜೊತೆ ಎರಡನೇ ಸ್ಥಾನವನ್ನು ಉಳಿಸಿಕೊಂಡಿದ್ದರೆ, ರಣವೀರ್ ಸಿಂಗ್ ಎರಡನೇ ವರ್ಷ 102.9 ಮಿಲಿಯನ್ ಡಾಲರ್ ಮೌಲ್ಯದೊಂದಿಗೆ ಮತ್ತೆ ಮೂರನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ ಎಂದು ಸಂಸ್ಥೆ ತನ್ನ ಆರನೇ ಆವೃತ್ತಿಯ ಸೆಲೆಬ್ರಿಟಿ ಬ್ರಾಂಡ್ ಮೌಲ್ಯಮಾಪನ ಅಧ್ಯಯನದಲ್ಲಿ ತಿಳಿಸಿದೆ.

2020ರಲ್ಲಿ ಅಗ್ರ 20 ಸೆಲೆಬ್ರಿಟಿಗಳ ಒಟ್ಟಾರೆ ಬ್ರಾಂಡ್ ಮೌಲ್ಯವು 1 ಬಿಲಿಯನ್ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ, ಎಲ್ಲ ಚಟುವಟಿಕೆಗಳನ್ನು ಕೊರೊನಾ ಕುಂಠಿತಗೊಳಿಸಿದ್ದರಿಂದ 2019 ರಿಂದ ಶೇ. 5 ರಷ್ಟು ಬ್ರಾಂಡ್ ಮೌಲ್ಯ ಕಡಿಮೆಯಾಗಿದೆ ಎಂದು ಅಧ್ಯಯನ ತಿಳಿದು ಬಂದಿದೆ.

ಅಧ್ಯಯನವು ಸೆಲೆಬ್ರಿಟಿಗಳು ಉತ್ಪನ್ನಗಳಿಗೆ ಪಡೆದ ಜಾಹೀರಾತುಗಳು ಮತ್ತು ಸಾಮಾಜಿಕ ಮಾಧ್ಯಮ ಉಪಸ್ಥಿತಿಯಲ್ಲಿ ಪಡೆದ ಬ್ರಾಂಡ್ ಮೌಲ್ಯವನ್ನು ಆಧರಿಸಿದೆ.

ಇನ್ನೂ, 51.1 ಮಿಲಿಯನ್ ಡಾಲರ್ ಮೌಲ್ಯದೊಂದಿಗೆ, ಶಾರುಖ್ ಖಾನ್ ನಾಲ್ಕನೇ ಸ್ಥಾನದಲ್ಲಿದ್ದರೆ, ದೀಪಿಕಾ ಪಡುಕೋಣೆ 50.4 ಮಿಲಿಯನ್ ಡಾಲರ್ ಮೌಲ್ಯದ ಮೂಲಕ ಐದನೇ ಸ್ಥಾನದಲ್ಲಿದ್ದಾರೆ. ಆದರೆ, 2019 ರಲ್ಲಿ ಮೂರನೇ ಸ್ಥಾನದಲ್ಲಿದ್ದ ಅವರು ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ. ಇನ್ನೂ ನಟಿ ಆಲಿಯಾ ಭಟ್ 2019 ರಲ್ಲಿ ಏಳನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಜಿಗಿದಿದ್ದಾರೆ. .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT