ಗುರುವಾರ , ಆಗಸ್ಟ್ 5, 2021
21 °C

ಆಸ್ಟ್ರೇಲಿಯಾದ ಮೆಲ್ಬರ್ನ್‌ ಬೀದಿಗಳಿಗೆ ಸಚಿನ್‌, ಕೊಹ್ಲಿ, ಕಪಿಲ್‌ ಹೆಸರು

ಪಿಟಿಐ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್‌: ‘ತೆಂಡೂಲ್ಕರ್‌ ಡ್ರೈವ್‌’, ‘ಕೊಹ್ಲಿ ಕ್ರೆಸೆಂಟ್‌’ ಮತ್ತು ‘ದೇವ್‌ ಟೆರೆಸ್‌’...

ಮೆಲ್ಬರ್ನ್‌ ಸಮೀಪದ ರಾಕ್‌ಬ್ಯಾಂಕ್‌ ಉಪನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೌಸಿಂಗ್‌ ಎಸ್ಟೇಟ್‌ನ ಪ್ರಮುಖ ಬೀದಿಗಳಿಗೆ ಇಡಲು ನಿರ್ಧರಿಸಿರುವ ಹೆಸರುಗಳಿವು.

ಆ್ಯಕೋಲೇಡ್‌ ಎಸ್ಟೇಟ್‌ ಸಂಸ್ಥೆಯು ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯ ಮೂಲದವರನ್ನು ಸೆಳೆಯುವ ಸಲುವಾಗಿ ಪ್ರಮುಖ ಬೀದಿಗಳಿಗೆ ಭಾರತದ ದಿಗ್ಗಜ ಕ್ರಿಕೆಟಿಗರಾದ ಕಪಿಲ್‌ ದೇವ್‌, ಸಚಿನ್‌ ತೆಂಡೂಲ್ಕರ್‌ ಹಾಗೂ ವಿರಾಟ್‌ ಕೊಹ್ಲಿ ಅವರ ಹೆಸರಿಡಲು ಮುಂದಾಗಿದೆ.

ಇವರ ಜೊತೆಗೆ ಆಸ್ಟ್ರೇಲಿಯಾದ ಸ್ಟೀವ್‌ ವಾ (ವಾ ಸ್ಟ್ರೀಟ್‌), ಪಾಕಿಸ್ತಾನದ ಜಾವೇದ್‌ ಮಿಯಂದಾದ್ (ಮಿಯಂದಾದ್‌ ಸ್ಟ್ರೀಟ್‌‌), ವೆಸ್ಟ್‌ ಇಂಡೀಸ್‌ನ ಕರ್ಟ್ಲಿ ಆ್ಯಂಬ್ರೋಸ್ (ಆ್ಯಂಬ್ರೋಸ್‌ ಸ್ಟ್ರೀಟ್‌‌) ಹಾಗೂ ಗ್ಯಾರಿ ಸೋಬರ್ಸ್ (ಸೋಬರ್ಸ್‌ ಡ್ರೈವ್‌‌), ದಕ್ಷಿಣ ಆಫ್ರಿಕಾದ ಜಾಕ್‌ ಕಾಲಿಸ್ (ಕಾಲಿಸ್‌ ವೇ‌), ನ್ಯೂಜಿಲೆಂಡ್‌ನ ರಿಚರ್ಡ್‌ ಹ್ಯಾಡ್ಲಿ (ಹ್ಯಾಡ್ಲಿ ಸ್ಟ್ರೀಟ್‌) ಮತ್ತು ಪಾಕಿಸ್ತಾನದ ವಾಸೀಂ ಅಕ್ರಂ (ಅಕ್ರಮ್‌ ವೇ) ಅವರ ಹೆಸರನ್ನು ಬೀದಿಗಳಿಗೆ ನಾಮಕರಣ ಮಾಡಲು ನಿಶ್ಚಯಿಸಿದೆ.

‘ಒಟ್ಟು 60 ಕ್ರಿಕೆಟಿಗರ ಪಟ್ಟಿಯನ್ನು ನಾವು ಮೆಲ್ಟನ್‌ ಕೌನ್ಸಿಲ್‌ಗೆ ಕಳುಹಿಸಿದ್ದೆವು. ಇದರಲ್ಲಿ ಆಸ್ಟ್ರೇಲಿಯಾದ ಡಾನ್‌ ಬ್ರಾಡ್ಮನ್‌, ಶ್ರೀಲಂಕಾದ ಕುಮಾರ ಸಂಗಕ್ಕಾರ, ಭಾರತದ ರಾಹುಲ್‌ ದ್ರಾವಿಡ್‌ ಮತ್ತು ಮಹೇಂದ್ರ ಸಿಂಗ್‌ ಧೋನಿ ಅವರ ಹೆಸರುಗಳೂ ಇದ್ದವು. ಕೆಲ ಕಾರಣಗಳಿಂದಾಗಿ ಈ ಹೆಸರುಗಳನ್ನು ಕೈಬಿಡುವಂತೆ ಕೌನ್ಸಿಲ್‌ ಸೂಚಿಸಿದೆ’ ಎಂದು ರೆಸಿ ವೆಂಚರ್‌ನ ನಿರ್ದೇಶಕ ಖುರಮ್‌ ಸಯೀದ್‌ ತಿಳಿಸಿದ್ದಾರೆ.

‘ಕೊಹ್ಲಿ ನನ್ನ ಮೆಚ್ಚಿನ ಆಟಗಾರ. ಹೀಗಾಗಿ ಪ್ರತಿಷ್ಠಿತ ಬಡಾವಣೆಯ ಬೀದಿಗೆ ಅವರ ಹೆಸರಿಟ್ಟಿದ್ದೇನೆ’ ಎಂದೂ ಅವರು ನುಡಿದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು