ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 100ನೇ ಪಂದ್ಯವಾಡಿದ ವಿರಾಟ್ ಕೊಹ್ಲಿ

Published 2 ಏಪ್ರಿಲ್ 2024, 16:53 IST
Last Updated 2 ಏಪ್ರಿಲ್ 2024, 16:53 IST
ಅಕ್ಷರ ಗಾತ್ರ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 100ನೇ ಪಂದ್ಯವಾಡಿದರು.

ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಅವರು ಈ ಖ್ಯಾತಿಗೆ ಪಾತ್ರರಾದರು. ಆದರೆ, ಈ ಪಂದ್ಯದಲ್ಲಿ ಅವರು ಕೇವಲ 22 ರನ್‌ಗೆ ನಿರ್ಗಮಿಸಿದ್ದಾರೆ.

ಈ ಮೂಲಕ ಒಂದೇ ಕ್ರೀಡಾಂಗಣದಲ್ಲಿ 100 ಪಂದ್ಯವಾಡಿದ ಭಾರತದ ಮೊದಲ ಕ್ರಿಕೆಟರ್ ಎಂಬ ಖ್ಯಾತಿಗೆ ಕೊಹ್ಲಿ ಪಾತ್ರರಾದರು.

ಈ ಕ್ರೀಡಾಂಗಣದಲ್ಲಿ ಅವರು, 39.95ರ ಸರಾಸರಿಯಲ್ಲಿ 3,276 ರನ್ ಸಿಡಿಸಿದ್ದಾರೆ. ಇಲ್ಲಿ ಯಾವುದೇ ಒಬ್ಬ ಬ್ಯಾಟರ್ ಗಳಿಸಿದ ಅತ್ಯಧಿಕ ರನ್ ಇದಾಗಿದೆ. ಅವರ ಸ್ಟ್ರೈಕ್ ರೇಟ್ 141.75 ರಷ್ಟಿದ್ದು, ಅದರಲ್ಲಿ 4 ಶತಕ ಮತ್ತು 25 ಅರ್ಧಶಯಕ ಸೇರಿವೆ.

ಈ ಕ್ರೀಡಾಂಗಣದಲ್ಲಿ ಅವರ ಗರಿಷ್ಠ ಮೊತ್ತ 113 (50) ಆಗಿದ್ದ, 2016ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಬಂದಿದೆ.

ಐಪಿಎಲ್‌ನಲ್ಲಿ ಅತ್ಯಧಿಕ ರನ್ ಗಳಿಸಿದವರ ಸಾಲಿನಲ್ಲೂ ಕೊಹ್ಲಿ ಅಗ್ರಸ್ಥಾನದಲ್ಲಿದ್ದು, ಈ ವರೆಗೆ 7,500 ರನ್ ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಶಿಖರ್ ಧವನ್ 6,754 ರನ್ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT