ನವದೆಹಲಿ: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ 10 ಕೋಟಿ ಅನುಯಾಯಿಗಳನ್ನು ಹೊಂದಿದ ಮೊದಲ ಕ್ರಿಕೆಟಿಗ ಎಂಬ ಗೌರವಕ್ಕೆ ಭಾಜನವಾಗಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಅಭಿಮಾನಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ವಿಶೇಷ ವಿಡಿಯೊ ಹಂಚಿರುವ ವಿರಾಟ್ ಕೊಹ್ಲಿ, 'ನೀವು ಈ ಪಯಣವನ್ನು ಸುಂದರಗೊಳಿಸಿದ್ದೀರಿ. ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದದಿಂದ ಕೃತಜ್ಞನಾಗಿದ್ದೇನೆ. ಧನ್ಯವಾದಗಳು' ಎಂದು ಉಲ್ಲೇಖಿಸಿದ್ದಾರೆ.
ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಮೆಚ್ಚಿನ ಕೆಲವು ಪೋಸ್ಟ್‌ಗಳನ್ನು ಹೈಲೈಟ್ ಮಾಡಿ ವಿಡಿಯೊವನ್ನು ಹಂಚಿದ್ದಾರೆ. ಜೀವನದ ಪ್ರಮುಖ ಕ್ಷಣಗಳು ಇದರಲ್ಲಿ ಒಳಗೊಂಡಿದೆ.
'ಜೊತೆಯಾಗಿ ಸಾಧಿಸಿದ ಮೈಲುಗಲ್ಲು' ಎಂಬ ಪದದೊಂದಿಗೆ ವಿಡಿಯೊ ಪ್ರಾರಂಭವಾಗುತ್ತದೆ. ವಿಡಿಯೊದಲ್ಲಿ ಬಾಲ್ಯದ ಚಿತ್ರ, ತಾಯಿಯೊಂದಿಗಿನ ಚಿತ್ರ, ಮದುವೆ ಚಿತ್ರ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸುವ ಚಿತ್ರ, 2019 ಏಕದಿನ ವಿಶ್ವಕಪ್ ಸಂದರ್ಭದಲ್ಲಿ 87 ವರ್ಷದ ಹಿರಿಯ ಅಭಿಮಾನಿಯನ್ನು ಭೇಟಿಯಾದ ಕ್ಷಣ ಇತ್ಯಾದಿ ಸ್ಮರಣೀಯ ಕ್ಷಣಗಳನ್ನು ಒಳಗೊಂಡಿದೆ.
ಇನ್‌ಸ್ಟಾಗ್ರಾಂನಲ್ಲಿ 10 ಕೋಟಿ ಅಭಿಮಾನಿಗಳನ್ನು ಹೊಂದಿದ ಏಷ್ಯಾ ಖಂಡದ ಮೊದಲ ಸೆಲಿಬ್ರಿಟಿ ಎಂಬ ಹಿರಿಮೆಗೂ ವಿರಾಟ್ ಕೊಹ್ಲಿ ಭಾಜನವಾಗಿದ್ದಾರೆ. ಇದರೊಂದಿಗೆ ಪೋರ್ಚುಗಲ್ ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ (26.6 ಕೋಟಿ) ಹಾಗೂ ಬಾರ್ಸಿಲೋನಾ ನಾಯಕ ಲಯೋನೆಲ್ ಮೆಸ್ಸಿ (18.7 ಕೋಟಿ) ಎಲೈಟ್ ಸಾಲಿಗೆ ಸೇರ್ಪಡೆಯಾಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.