ನವದೆಹಲಿ: ಕೇರಳದಲ್ಲಿ ಆನೆಯೊಂದು ಕ್ರಿಕೆಟ್ ಆಡುತ್ತಿರುವ ದೃಶ್ಯವು ವೈರಲ್ ಆಗಿದೆ. ಪ್ರಸ್ತುತ ವಿಡಿಯೊ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಗಮನ ಸೆಳೆದಿದ್ದು, ಮನ ಮೆಚ್ಚಿದ್ದಾರೆ.

ತಮ್ಮ ಫೇಸ್‌ಬುಕ್ ಖಾತೆಯಲ್ಲಿ ವೀರು ವಿಡಿಯೊವನ್ನು ಹಂಚಿಕೊಂಡಿದ್ದು, 'ಇನ್‌ಸೈಡ್ ಔಟ್ ಓವರ್ ಕವರ್ಸ್' ಎಂದು ಕಾಮಂಟರಿಯನ್ನು ಬರೆದಿದ್ದಾರೆ.

ಆನೆಯ ಕ್ರಿಕೆಟ್ ಕೌಶಲ್ಯ ವೃತ್ತಿಪರ ಕ್ರಿಕೆಟಿಗರಿಗಿಂತಲೂ ಉತ್ತಮವಾಗಿದೆ. ಸೊಂಡಿಲಿನಲ್ಲಿ ಬ್ಯಾಟ್ ಹಿಡಿದು ಅದ್ಭುತ ಕ್ರಿಕೆಟಿಂಗ್ ಡ್ರೈವ್ ಮೂಲಕ ಗಮನ ಸೆಳೆದಿದೆ.

ಇದನ್ನೂ ಓದಿ:

ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಸಹ ಈ ಕುರಿತು ಟ್ವೀಟ್ ಮಾಡಿದ್ದು, ಖಂಡಿತವಾಗಿಯೂ ಆನೆ ಇಂಗ್ಲಿಂಷ್ ಪಾಸ್‌ಪೋರ್ಟ್ ಹೊಂದಿರಬೇಕು ಎಂದಿದ್ದಾರೆ.

ಆದರೆ ಕೆಲವು ತಿಂಗಳುಗಳ ಹಿಂದೆಯಷ್ಟೇ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೇಳೆ ಭಾರತದ ಪಿಚ್‌ಗಳ ಬಗ್ಗೆ ದೂರಿದ್ದ ವಾನ್‌ಗೆ ಅಭಿಮಾನಿಗಳು ತಕ್ಕ ಉತ್ತರವನ್ನೇ ನೀಡಿದ್ದಾರೆ.

ಪಿಚ್ ಧೂಳಿನಿಂದ ಕೂಡಿದ್ದು, ಇಂಗ್ಲೆಂಡ್ ಆಟಗಾರರಿಗೆ ಇಲ್ಲಿ ಆಡಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.