ಗುರುವಾರ , ಜನವರಿ 23, 2020
28 °C

ಕಿಂಗ್ಸ್‌ ಇಲೆವನ್‌ಗೆ ಜಾಫರ್‌ ಕೋಚ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದ ಅನುಭವಿ ಕ್ರಿಕೆಟ್‌ ಆಟಗಾರ ವಾಸೀಂ ಜಾಫರ್‌ ಅವರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಆಡುವ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಬ್ಯಾಟಿಂಗ್‌ ಕೋಚ್‌ ಆಗಿ ನೇಮಕಗೊಂಡಿದ್ದಾರೆ.

ಫ್ರಾಂಚೈಸ್‌ನ ಹಿರಿಯ ಅಧಿಕಾರಿಯೊಬ್ಬರು ಗುರುವಾರ ಈ ವಿಷಯ ತಿಳಿಸಿದ್ದಾರೆ.

ವಾಸೀಂ ಅವರು 2000ರಿಂದ 2008ರ ಅವಧಿಯಲ್ಲಿ ಭಾರತದ ಪರ 31 ಟೆಸ್ಟ್‌ ಹಾಗೂ ಎರಡು ಏಕದಿನ ಪಂದ್ಯಗಳನ್ನು ಆಡಿದ್ದರು. ಟೆಸ್ಟ್‌ನಲ್ಲಿ 34.11ರ ಸರಾಸರಿಯಲ್ಲಿ 1,944ರನ್‌ ದಾಖಲಿಸಿದ್ದಾರೆ. ಇದರಲ್ಲಿ ಐದು ಶತಕ ಮತ್ತು 11 ಅರ್ಧಶತಕಗಳು ಸೇರಿವೆ.

2006ರಲ್ಲಿ ಸೇಂಟ್‌ ಜಾನ್ಸ್‌ನಲ್ಲಿ ನಡೆದಿದ್ದ ವೆಸ್ಟ್‌ ಇಂಡೀಸ್‌ ಎದುರಿನ ಹಣಾಹಣಿಯಲ್ಲಿ 212ರನ್‌ ಬಾರಿಸಿದ್ದರು. ಇದು ಅವರ ವೈಯಕ್ತಿಕ ಶ್ರೇಷ್ಠ ಮೊತ್ತವೆನಿಸಿದೆ.

ಮುಂಬೈನ 41 ವರ್ಷದ ಆಟಗಾರ, ರಣಜಿ ಟ್ರೋಫಿಯಲ್ಲಿ ವಿದರ್ಭ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ರಣಜಿಯಲ್ಲಿ 150 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ.

254 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಜಾಫರ್‌ 19,147ರನ್‌ ಬಾರಿಸಿದ್ದಾರೆ. 314 ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

ವಾಸೀಂ ಅವರು ಐಪಿಎಲ್‌ ಚೊಚ್ಚಲ ಆವೃತ್ತಿಯಲ್ಲಿ (2008) ಆರ್‌ಸಿಬಿ ತಂಡದ ಪರ ಆರು ಪಂದ್ಯಗಳನ್ನು ಆಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು