ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ್ಟ್‌ ಶತಕ: ಇಂಗ್ಲೆಂಡ್‌ ತಂಡಕ್ಕೆ ಗೆಲುವು

Published 20 ಡಿಸೆಂಬರ್ 2023, 23:30 IST
Last Updated 20 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಸ್ಯಾನ್ ಫೆರ್ನಾಂಡೊ: ಸತತ ಎರಡನೇ ಶತಕ ಗಳಿಸಿದ ಫಿಲಿಪ್ ಸಾಲ್ಟ್ ನೆರವಿನಿಂದ ಇಂಗ್ಲೆಂಡ್ ತಂಡವು ವೆಸ್ಟ್‌ ಇಂಡೀಸ್‌ ವಿರುದ್ಧದ  ಟಿ20 ಸರಣಿಯ ನಾಲ್ಕನೇ ಪಂದ್ಯವನ್ನು 75 ರನ್‌ಗಳಿಂದ ಜಯಿಸಿತು. ಇದರೊಂದಿಗೆ ಸರಣಿ ಗೆಲುವಿನ ಕನಸು ಜೀವಂತವಾಗಿರಿಸಿದೆ.

ಮೊದಲ 2 ಪಂದ್ಯ ವೆಸ್ಟ್‌ಇಂಡೀಸ್‌ ಗೆದ್ದಿದ್ದರೆ, ನಂತರದ 2 ಪಂದ್ಯ ಆಂಗ್ಲ ಪಡೆ ಜಯಿಸಿ ಸರಣಿಯು 2–2ರಿಂದ ಸಮಬಲವಾಗಿದೆ. ನಿರ್ಣಾ ಯಕ ಐದನೇ ಪಂದ್ಯ ಗುರುವಾರ ನಡೆಯಲಿದೆ.

ಸಾಲ್ಟ್‌  ಶತಕದ (119; 57ಎ, 4x8, 6x10) ನೆರವಿನಿಂದ ಇಂಗ್ಲೆಂಡ್‌ 20 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 267 ರನ್‌ ಗಳಿಸಿತು. ಇದು ಟಿ20 ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ ತಂಡದ ಗರಿಷ್ಠ ಮೊತ್ತವಾಗಿದೆ. ವೆಸ್ಟ್‌ಇಂಡೀಸ್‌ 15.3 ಓವರ್‌ಗಳಲ್ಲಿ 192 ರನ್‌ಗೆ ಕುಸಿಯಿತು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 267 (ಫಿಲಿಪ್ ಸಾಲ್ಟ್ 119, ಜೋಸ್‌ ಬಟ್ಲರ್‌ 55, ಲಿಯಾಮ್ ಲಿವಿಂಗ್‌ಸ್ಟೋನ್ ಔಟಾಗದೆ 54) ವೆಸ್ಟ್‌ಇಂಡೀಸ್‌: 15.3 ಓವರ್‌ಗಳಲ್ಲಿ 192 (ನಿಕೊಲಸ್ ಪೂರನ್ 39, ಆ್ಯಂಡ್ರೆ ರಸೆಲ್ 51, ರೀಸ್ ಟೋಪ್ಲಿ 37ಕ್ಕೆ 3, ಸ್ಯಾಮ್ ಕರನ್‌ 25ಕ್ಕೆ 2, ರೆಹಾನ್ ಅಹಮದ್ 42ಕ್ಕೆ 2):

ಫಲಿತಾಂಶ: ಇಂಗ್ಲೆಂಡ್‌ಗೆ 75 ರನ್‌ ಜಯ, ಪಂದ್ಯ ಆಟಗಾರ: ಫಿಲಿಪ್ ಸಾಲ್ಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT